Saturday, March 6, 2021
Home ಜಿಲ್ಲೆ ಬೆಳಗಾವಿ ಕಾಗವಾಡ ತಾಲ್ಲೂಕಾಡಳಿತದಿಂದ 72 ನೇ ಸರಳ ಗಣರಾಜ್ಯೋತ್ಸವ ದಿನಾಚರಣೆ

ಇದೀಗ ಬಂದ ಸುದ್ದಿ

ಕಾಗವಾಡ ತಾಲ್ಲೂಕಾಡಳಿತದಿಂದ 72 ನೇ ಸರಳ ಗಣರಾಜ್ಯೋತ್ಸವ ದಿನಾಚರಣೆ

ಬೆಳಗಾವಿ : ಜಿಲ್ಲೆಯ ಕಾಗವಾಡ ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಕಾಗವಾಡ ತಾಲ್ಲೂಕಾಡಳಿತದಿಂದ 72 ನೇ ಗಣರಾಜ್ಯೋತ್ಸವ ಸರಳವಾಗಿ ಆಚರಿಸಲಾಯಿತು

ಧ್ವಜಾರೋಹಣವನ್ನು ಕಾಗವಾಡ ತಹಶಿಲ್ದಾರ ಪ್ರಮಿಳಾ ದೇಶಪಾಂಡೆ ಹಾಗೂ ಸಚಿವ ಶ್ರೀಮಂತ ಪಾಟೀಲ್ ನೆರವೇರಿಸಿದರು.ನಂತರ ಕೋವಿಡ್ ವಾರಿಯರ್ಸ್‌ ಹಾಗೂ ಮಾಜಿ ಸೈನಿಕರಿಗೆ ಸತ್ಕರಿಸಲಾಯಿತು.ಹಾಗೂ ಪೋಲಿಸ್ ಇಲಾಖೆ ಪರೇಡ್,ಎನ್ ಎಸ್ ಎಸ್ ವಿದ್ಯಾರ್ಥಿಗಳ ಪರೇಡ್ ,ಶಾಲಾ ವಿದ್ಯಾರ್ಥಿಗಳಿಂದ ಪರೇಡ್  ನಡೆಸಲಾಯಿತು

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಶಿಲ್ದಾರ ಪ್ರಮಿಳಾ ದೇಶಪಾಂಡೆ,ಈ ದಿನ ನಮಗೆ ಮಹತ್ವದ ದಿನ ಭಾರತೀಯ ಪ್ರಜೆಗಳೆಲ್ಲರೂ ಸರ್ವ ಸ್ವತಂತ್ರವಾದ ದಿನ ಇವತ್ತಿ ನಾವು ನೀವುಗಳೆಲ್ಲಾ ಸರ್ವರೂ ಸಮಾನತೆಯಿಂದ ಬಾಳಲು ಹಾಗೂ ಸ್ವತಂತ್ರವಾಗಿ ಜೀವಿಸಲು ಡಾ.ಬಿ.ಆರ್.ಅಂಬೇಡ್ಕರ್ ಕಾರಣ ಅವರು ಸಂವಿಧಾನ ರಚನೆ ಮಾಡದಿದ್ದರೆ ನಮ್ಮ ಜೀವನ ಬಹಳ ಕಷ್ಟವಾಗಿರುತ್ತಿತ್ತು.ಡಾ.ಬಾಬಾಸಾಹೇಬರು ಸಂವಿಧಾನದ ಬರೆದಿದ್ದರಿಂದ ಜನಪ್ರತಿನಿಧಿಗಳನ್ನ ಆಯ್ಕೆ ಮಾಡಿ ಸುಭದ್ರ ಸರ್ಕಾರ ರಚನೆ ಅವಕಾಶ ಕಲ್ಪಿಸಲು ಸಾಧ್ಯವಾಗಿದೆ ಎಂದರು

ಇದೆ ವೇಳೆ ಗಣರಾಜ್ಯೋತ್ಸವ ಪ್ರಯುಕ್ತ ಮಾತನಾಡಿದ ಜವಳಿ ಸಚಿವ ಶ್ರೀಮಂತ ಪಾಟೀಲ್ ದೇಶದಲ್ಲಿ ಹಲವು ಧರ್ಮಗಳ ಹಬ್ಬದ ಆಚರಣೆಯನ್ನು ಮಾಡುತ್ತಾರೆ ಆದರೆ ದೇಶಾದ್ಯಂತ ಎಲ್ಲ ಭಾರತೀಯರೂ ಸೇರಿ ಆಚರಿಸುವ ಹಬ್ಬಗಳು ಎರಡೇ ಒಂದು ಸ್ವಾತಂತ್ರ್ಯ ದಿನ ಹಾಗೂ ಗಣರಾಜ್ಯೋತ್ಸವ ದಿನ.1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ಆದರೆ 1950 ರಲ್ಲಿ ದೇಶಕ್ಕೆ ಡಾ.ಬಿ.ಆರ.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಪ್ರತಿಯೊಬ್ಬ ಪ್ರಜೆಗಳಿಗೆ ಸ್ವಾತಂತ್ರ್ಯ ಸಿಕ್ಕಂತಾಯಿತು .ಡಾ.ಬಿ.ಆರ್.ಅಂಬೇಡ್ಕರ್ ಅವರು ಬಹಳ ಕಷ್ಟ ಪಟ್ಟು ಸಂವಿಧಾನ ರಚನೆ ಮಾಡಿದ್ದಾರೆ ಅದು ಇಡೀ ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನವಾಗಿದೆ ಅದರಿಂದ ಈ ದೇಶ ಸಂವಿಧಾನದಿಂದ ಮಾತ್ರ ಆಡಳಿತ ನಡೆಸಲು ಸಾಧ್ಯವಾಗಿದೆ ಎಂದರು

ತಾಪಂ ಕಾರ್ಯನಿರತ ಅಧಿಕಾರಿ ವೀರಣಗೌಡ ಏಗಣಗೌಡರ, ಯತೀಶ್ವರಾನಂದ ಸ್ವಾಮೀಜಿ,ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಆರ್.ಮುಂಜೆ,ಪಿಎಸ್ಐ ಹಣಮಂತ ಧರ್ಮಟ್ಟಿ, ತಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಶಿವಾನಂದ ಮಹಾವಿದ್ಯಾಲಯ ಸರ್ವ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು

ಸಚಿನ್ ಕಾಂಬಳೆ

ದಿ ನ್ಯೂಸ್೨೪ ಕನ್ನಡ ‌

ಕಾಗವಾಡ

TRENDING