Saturday, March 6, 2021
Home ಜಿಲ್ಲೆ ಬಾಗಲಕೋಟೆ ದೇಶಕ್ಕೆ ಸೈನಿಕರು ಹೇಗೋ ಹಾಗೆ ಅನ್ನ ನೀಡುವ ರೈತರು ಅಷ್ಟೇ ಮುಖ್ಯ : ಶ್ರೀ...

ಇದೀಗ ಬಂದ ಸುದ್ದಿ

ದೇಶಕ್ಕೆ ಸೈನಿಕರು ಹೇಗೋ ಹಾಗೆ ಅನ್ನ ನೀಡುವ ರೈತರು ಅಷ್ಟೇ ಮುಖ್ಯ : ಶ್ರೀ ಶಶಿಕಾಂತ್ ಗುರೂಜಿ

ಬಾಗಲಕೋಟೆ  : ದೇಶಕ್ಕೆ ಸೈನಿಕರು ಹೇಗೋ ಹಾಗೆ ಅನ್ನ ನೀಡುವ ರೈತರು ಅಷ್ಟೇ ಮುಖ್ಯ . ಆದರೆ ರೈತರಿಗೆ ಮಾರಕವಾಗುವ ಎಪಿಎಂಸಿ ಕಾಯ್ದೆಯಿಂದ ಜಾರಿಗೆ ತಂದು ರೈತರನ್ನು ಸಂಪೂರ್ಣ ನಾಶ ಮಾಡುವ ಹುನ್ನಾರ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಪರಮ ಪೂಜ್ಯ ಶ್ರೀ ಶಶಿಕಾಂತ ಗುರೂಜಿ ಹೇಳಿದರು.

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದಲ್ಲಿ ಶ್ರೀ ಗುರು ಅಲ್ಲಮಪ್ರಭು ದೇವರ ದೇವಸ್ಥಾನ ಕ್ಷೇತ್ರದಲ್ಲಿ 13 ನೇ ವರ್ಷದ ಸಡಗರದಲ್ಲಿ ಪ್ರಭುವಿನ ಮಹಾಪ್ರಭೋತವ ಮತ್ತು ರೈತ ಸಮಾವೇಶ ನಡೆಯಿತು. ಕಾಮಧೇನು ಕಲ್ಪವೃಕ್ಷ ಭವರೋಗ ವೈದ್ಯ ಮಹಾವೀರ ಪ್ರಭುಗಳು ಮಾತನಾಡಿ. ಬದುಕು ವ್ಯರ್ಥ ಮಾಡದೆ ಸಮಯ ಅರ್ಥ ಮಾಡಿಕೊಂಡು ಬದುಕಬೇಕು. ಒಳ್ಳೆಯ ಸಂಸ್ಕಾರ ನಮ್ಮ ಬದುಕನ್ನೇ ಬದಲಿಸುತ್ತೆ ಕಾಯಕಯೋಗಿಗಳಾಗಿ ಕೆಲಸ ಮಾಡಬೇಕು.

ಇಂದಿನ ಯುವ ಸಮೂಹ ಇದೆಲ್ಲವನ್ನೂ ಅರ್ಥ ಮಾಡಿಕೊಂಡು ಜೀವನದಲ್ಲಿ ಸರಿ ದಾರಿಯಲ್ಲಿ ನಡೆಯಬೇಕು ಎಂದು  ಶ್ರೀಗಳು ಹೇಳಿದರು.  ಮಠ-ಮಾನ್ಯಗಳು, ಶರಣ-ಸಂತರು ಸಮಾಜದ ಅಂಕು-ಡೊಂಕು ತಿದ್ದು ಕೆಲಸ ಮಾಡುತ್ತಿದ್ದಾರೆ. ಸರಿ ತಪ್ಪು ಜನರಿಗೆ ಹೇಳುವ ಕೆಲಸ ಮಾಡುತ್ತಿದ್ದು, ಇದರ ಉದ್ದೇಶ ಜನರನ್ನು ಬದುಕಿನಡೆ ನಡೆಯುವಂತೆ ಮಾಡಿದೆ ಎಂದರು.

ಇಂದು ಸಮಾಜ ಸರಿಯಿಲ್ಲ. ಆದರೆ ಅದನ್ನು ಸರಿ ಮಾಡದೇ ಬಿಡಬಾರದು. ಎಲ್ಲರೂ ತಿಳಿದು ಮುನ್ನಡೆಯಬೇಕು. ಇಲ್ಲಿನ ಪರಂಪರೆ ನೋಡಿದರೆ ಎಲ್ಲವೂ ಜೀವಂತವಾಗಿದೆ ಎಂದೆನಿಸುತ್ತದೆ. ಶ್ರೀಗಳ ಸಂಕಲ್ಪದೊಂದಿಗೆ ಅದ್ಭುತ ಕಾರ್ಯಕ್ರಮ ನಡೆದು ಬರುತ್ತಿದೆ ಎಂದರು.

ಇಲ್ಲಿನ ಭಕ್ತ ಸಮೂಹ ಯುವಕರು ಸಮಾಜದಲ್ಲಿ ಒಂದು ನಿಮಿಷವೂ ವ್ಯರ್ಥ ಮಾಡಬಾರದು. ಆದರೆ ಇಲ್ಲಿನ ಯುವಕರಲ್ಲಿ ಕೀಳರಿಮೆಯ ಭಾವನೆ ತುಂಬಾ ಇದೆ. ತಾನು ಏನು ಮಾಡಿದೆ ಎನ್ನುವುದಕ್ಕಿಂತ ಇನ್ನೊಬ್ಬರ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದಾರೆ. ನಮ್ಮಲ್ಲಿ ಸಂಕಲ್ಪದ ಕೊರತೆ ಕಾಡುತ್ತಿದೆ. ಏನಾದರೂ ಮಾಡು, ಖಾಲಿ ಕೂಡಬೇಡ. ಮಾಡುವ ಕೆಲಸ ಶ್ರದ್ಧೆಯಿಂದ ಮಾಡು. ಕೀಳರಿಮೆ ದೂರವಿಡಬೇಕು ಎಂದರು.

ಇದೇ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶಾಂತಿದಾತ ಸಾಹೇಬಅಣ್ಣ ಮಹಾರಾಜರು ಇಂಡಿ. ಶ್ರೀ ಬಸವರಾಜೇಂದ್ರ ಶ್ರೀಗಳು. ರೈತ ಮುಖಂಡರಾದ ಗಂಗಾಧರ್ ಮೇಟಿ. ಹೊಣ್ಣಪ್ಪ ಬಿರಡಿ. ಬಂದು ಪಕಾಲಿ. ಶಿವಲಿಂಗ ಟಿರ್ಕಿ. ಗಂಗಪ್ಪ ಜಕ್ಕಣ್ಣವರ. ಸೇರಿದಂತೆ ಮುಂತಾದ ರೈತರು ಪಾಲ್ಗೊಂಡಿದ್ದರು.

ಪ್ರಕಾಶ ಕುಂಬಾರ

ದಿ ನ್ಯೂಸ್ 24ಕನ್ನಡ

ಬಾಗಲಕೋಟೆ

TRENDING