Saturday, March 6, 2021
Home ಜಿಲ್ಲೆ ಗದಗ ಗದಗ : ಕಡಲೆಗೆ ಕುಂಕುಮ ರೋಗದ ಕಾಟ, ರೈತನ ನರಳಾಟ

ಇದೀಗ ಬಂದ ಸುದ್ದಿ

ಗದಗ : ಕಡಲೆಗೆ ಕುಂಕುಮ ರೋಗದ ಕಾಟ, ರೈತನ ನರಳಾಟ

ಗದಗ : ರೈತರಿಗೆ ಈ ಭಾರಿ ಒಂದಲ್ಲ ಒಂದು ಸಮಸ್ಯೆ ಕಾಡ್ತಿದೆ. ಮುಂಗಾರು ಬೆಳೆಗೆ ಪ್ರವಾಹ, ಅತೀವೃಷ್ಠಿ ಕಾಡಿ ಸಾಕಷ್ಟು ಬೆಳೆ ನಾಶವಾಗಿತ್ತು. ಸಾವಿರಾರು ರೈತರು ನಷ್ಟ ಅನುಭವಿಸಿ ಇನ್ನೂ ಚೇತರಿಸಿಕೊಂಡಿಲ್ಲ. ಕೊನೆ ಪಕ್ಷ ಹಿಂಗಾರಿ ಬೆಳೆಯಾದರೂ ಕೈ ಹಿಡಿದೀತು ಅಂದ್ರೆ ಈಗ ರೋಗದ ಭೀತಿ ಎದುರಾಗಿದೆ.

 ಸದ್ಯ ಗದಗನಲ್ಲಿ ಈ ಭಾರಿ ಅತೀ ಹೆಚ್ಚು ಕಡಲೆಕಾಯಿ ಬೆಳೆಯಲಾಗಿದೆ. ಹಿಂಗಾರು ಬೆಳೆಯಾಗಿರುವ ಕಡಲೆ ಬೆಳೆಗೆ ಗದಗನಲ್ಲಿ ಕುಂಕುಮ ರೋಗ ಕಾಡ್ತಿದೆ. ಇದರಿಂದ ಜೊಟ್ಟುಕಾಳು ಬಿಡ್ತಿದೆ. ಬೆಳೆವಣಿಗೆಯಾದೆ ಕಾಳು ಜೊಟ್ಟಾಗಿ ಪರಿಣಮಿಸುತ್ತಿದೆ. ಇದರಿಂದ ರೈತ ಸಾಕಷ್ಟು ನಷ್ಟ ಅನುಭವಿಸುವಂತ ಸ್ಥಿತಿ ನಿರ್ಮಾಣವಾಗಿದೆ.

ಗದಗ ತಾಲ್ಲೂಕು, ನರಗುಂದ ತಾಲೂಕು ರೋಣ, ಗಜೇಂದ್ರಗಡ ತಾಲೂಕಿನ ಭಾಗದಲ್ಲಿ ಅತೀ ಹೆಚ್ಚು ಕಡಲೆ ಬೆಳೆಯಲಾಗಿದೆ. ಅದರಲ್ಲೂ ಗಜೇಂದ್ರಗಡ ತಾಲೂಕಿನ ನರೇಗಲ್ ಭಾಗದಲ್ಲಿ ಸಂಪೂರ್ಣವಾಗಿ ಕುಂಕುಮ ರೋಗಕ್ಕೆ ತುತ್ತಾಗಿದೆ. ಹೀಗಾಗಿ ಜಿಲ್ಲಾಡಳಿತ ಇತ್ತ ಗಮನಹರಿಸಬೇಕು ಅಂತ ಆಗ್ರಹಿಸಿದ್ದಾರೆ.

ಪ್ರವೀಣ ಶಿರಸಂಗಿ

ದಿ ನ್ಯೂಸ್ ೨೪ ಕನ್ನಡ

ಗದಗ

TRENDING