Saturday, March 6, 2021
Home ಅಂತರ್ ರಾಜ್ಯ ವಾಣಿಜ್ಯ ನಗರಿ ಮುಂಬೈನಲ್ಲಿ ಲಸಿಕೆ ಹಂಚಿಕೆ ಎರಡು ದಿನಗಳಿಗೆ ಸ್ಥಗಿತ

ಇದೀಗ ಬಂದ ಸುದ್ದಿ

ವಾಣಿಜ್ಯ ನಗರಿ ಮುಂಬೈನಲ್ಲಿ ಲಸಿಕೆ ಹಂಚಿಕೆ ಎರಡು ದಿನಗಳಿಗೆ ಸ್ಥಗಿತ

ಮುಂಬೈ: ವಾಣಿಜ್ಯ ನಗರಿ ಮುಂಬೈ ಹಾಗೂ ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಕೋವಿಡ್-19 ಲಸಿಕೆ ವಿತರಣೆಯನ್ನು ಎರಡು ದಿನಗಳ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

‘ಕೋವಿನ್’ ಆಯಪ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಜನವರಿ 17 ಹಾಗೂ 18ರಂದು ಮುಂಬೈನಲ್ಲಿ ಕೋವಿಡ್-19 ಲಸಿಕೆ ಹಂಚಿಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮುಂಬೈ ಮಹಾನಗರ ಪಾಲಿಕೆ ಮಾಹಿತಿ ಒದಗಿಸಿದೆ.

ಕೋವಿಡ್-19 ಲಸಿಕೆ ಪಡೆಯುವ ಮುಂಚೂಣಿಯ ಸೇನಾನಿಗಳ ಹೆಸರುಗಳನ್ನು ಕೋವಿನ್ ಆಯಪ್‌ನಲ್ಲಿ ನೊಂದಾಯಿಸಬೇಕಿದೆ. ಈ ಸಂಬಂಧ ತಾಂತ್ರಿಕ ದೋಷ ಕಂಡುಬಂದಿದೆ. ಇದನ್ನೀಗ ಕೇಂದ್ರ ಸರ್ಕಾರ ಸರಿಪಡಿಸುತ್ತಿದೆ ಎಂದು ಉಲ್ಲೇಖಿಸಲಾಗಿದೆ.

ಮುಂಬೈನಲ್ಲಿ ಭಾನುವಾರ ಹಾಗೂ ಸೋಮವಾರ ಕೋವಿಡ್-19 ಲಸಿಕೆ ವಿತರಣೆಯು ಸ್ಥಗತಿಗೊಳ್ಳಲಿದ್ದು, ಮಂಗಳವಾರದಂದು ಆರಂಭಗೊಳ್ಳಲಿದೆ. ಮಹಾರಾಷ್ಟ್ರದ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ರಾಜೇಶ್ ತೋಪೆ ಸಮಸ್ಯೆಯನ್ನು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರ ಗಮನಕ್ಕೆ ತಂದಿದ್ದಾರೆ. ಅಲ್ಲದೆ ಕೇಂದ್ರ ಸಚಿವರು ತುರ್ತಾಗಿ ಪರಿಹರಿಸುವ ಭರವಸೆ ನೀಡಿದ್ದಾರೆ.

ಕೋವಿಡ್-19 ಲಸಿಕೆ ಚುಚ್ಚುಮದ್ದು ಪಡೆಯುವ ಎಲ್ಲರೂ ಕೋವಿನ್ ಆಯಪ್‌ನಲ್ಲಿ ನೊಂದಾಯಿಸುವುದು ಕಡ್ಡಾಯವಾಗಿದೆ.

TRENDING