Sunday, June 13, 2021
Homeಜಿಲ್ಲೆಚಿಕ್ಕಬಳ್ಳಾಪುರಶ್ರೀ ರಾಮಮಂದಿರ ನಿರ್ಮಾಣ ದೇಶ ಒಗ್ಗೂಡಿಸುವ ಕಾರ್ಯ : ಸಚಿವ ಡಾ. ಕೆ ಸುಧಾಕರ್

ಇದೀಗ ಬಂದ ಸುದ್ದಿ

ಶ್ರೀ ರಾಮಮಂದಿರ ನಿರ್ಮಾಣ ದೇಶ ಒಗ್ಗೂಡಿಸುವ ಕಾರ್ಯ : ಸಚಿವ ಡಾ. ಕೆ ಸುಧಾಕರ್

ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಇಡೀ ದೇಶದ ಜನರನ್ನು ಒಗ್ಗೂಡಿಸುವ ಕೆಲಸ. ಇದರಿಂದ ದೇಶದಲ್ಲಿ ರಾಮರಾಜ್ಯ ನಿರ್ಮಾಣವಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ಶುಕ್ರವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿ ಉದ್ಘಾಟನೆ ಹಾಗೂ ಶ್ರೀರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡು ಮಾತನಾಡಿದರು.

ಶ್ರೀರಾಮಚಂದ್ರನ ಅವತಾರ ದಶಾವತಾರಗಳಲ್ಲಿ ವಿಶೇಷವಾಗಿದೆ. ಈ ಭೂಮಿ ಇರುವವರೆಗೂ ಶ್ರೀರಾಮನ ಕಥೆ ಆದರ್ಶ ಮತ್ತು ಪ್ರಸ್ತುತವಾಗಿರುತ್ತದೆ. ಶ್ರೀರಾಮ ಸೀತಾಮಾತೆಯನ್ನು ಕರೆತರಬೇಕಾದರೆ ವಾನರರು ಸಹಾಯ ಮಾಡಿದ್ದರು. ಶಿವಾಜಿ ಮಹಾರಾಜರು ಬ್ರಿಟಿಷರ ವಿರುದ್ಧ ಹೋರಾಟ ಮಾಡಲು ಜನರು ಕೈ ಜೋಡಿಸಿದರು. ಅದೇ ರೀತಿ ಶ್ರೀರಾಮನ ದೇಗುಲ ನಿರ್ಮಿಸಲು ದೇಶದ ಮೂಲೆ ಮೂಲೆಗಳಲ್ಲಿರುವ ಹಿಂದೂಗಳು ಜೊತೆಯಾಗಿದ್ದಾರೆ. ಈ ಕಾರ್ಯದಲ್ಲಿ ನಾನು ಕೂಡ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದರು ಸುಧಾಕರ್.‌

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಆರೆಸ್ಸೆಸ್‌ ಬಲವಾಗಿರುವಂತೆ ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲೂ ಸಂಘಟನೆ ಬಲವಾಗಬೇಕಿದೆ. ಕೋವಿಡ್ ಮಹಾಮಾರಿ ಬಂದಾಗ ಆರೆಸ್ಸೆಸ್‌ ಸ್ವಯಂ ಸೇವಕರು ಮನೆಮನೆಗೆ ತೆರಳಿ ನೆರವು ನೀಡಿದ್ದರು. ಆರೆಸ್ಸೆಸ್‌ನ ಶಿಸ್ತು, ಸಂಯಮ ದೇಶ ಪ್ರೇಮವನ್ನು ಎಲ್ಲರೂ ರೂಢಿಸಿಕೊಳ್ಳಬೇಕು ಎಂದರು ಸಚಿವರು.

ಕೆ.ಎಸ್.ನಾರಾಯಣಸ್ವಾಮಿ  

ದಿ ನ್ಯೂಸ್ 24 ಕನ್ನಡ

ಚಿಕ್ಕಬಳ್ಳಾಪುರ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img