Wednesday, January 20, 2021
Home ಸುದ್ದಿ ಜಾಲ ಕೇಂದ್ರ ಆಯುಷ್ ಆರೋಗ್ಯ ಸಚಿವ ಶ್ರೀಪಾದ್ ನಾಯಕ್ ಆರೋಗ್ಯ ಸ್ಥಿರ : ರಾಜನಾಥ್ ಸಿಂಗ್

ಇದೀಗ ಬಂದ ಸುದ್ದಿ

ಕೇಂದ್ರ ಆಯುಷ್ ಆರೋಗ್ಯ ಸಚಿವ ಶ್ರೀಪಾದ್ ನಾಯಕ್ ಆರೋಗ್ಯ ಸ್ಥಿರ : ರಾಜನಾಥ್ ಸಿಂಗ್

ಪಣಜಿಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕೇಂದ್ರ ಸಚಿವ, 68 ವರ್ಷದ ಶ್ರೀಪಾದ ನಾಯಕ್ ಅವರಿಗೆ ಇಲ್ಲಿನ ಆಸ್ಪತ್ರೆಯಲ್ಲಿ ಮಂಗಳವಾರ ಶಸ್ತ್ರಚಿಕಿತ್ಸೆಯನ್ನು ನಡೆಸ ಲಾಗಿದ್ದು, ಅವರ ಆರೋಗ್ಯ ಸ್ಥಿತಿಯು ಸ್ಥಿರವಾಗಿದೆ.

‘ಸಚಿವರು ಅಪಾಯದಿಂದ ಪಾರಾಗಿದ್ದಾರೆ‌. ಅಗತ್ಯಬಿದ್ದರೆ ಅವರನ್ನು ದೆಹಲಿಗೆ ಸ್ಥಳಾಂತರಿಸಲಾಗುವುದು’ ಎಂದು ಆಸ್ಪತ್ರೆಗೆ ಭೇಟಿ ನೀಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.

ದೆಹಲಿ ಏಮ್ಸ್‌ನ ತಜ್ಞ ವೈದ್ಯರ ತಂಡ ಗೋವಾ ವೈದ್ಯಕೀಯ ಆಸ್ಪತ್ರೆ ವೈದ್ಯರಿಗೆ ಚಿಕಿತ್ಸೆಗೆ ಸಹಕಾರ ನೀಡಲಿದೆ ಎಂದು ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿ ಸೋಮವಾರ ಸಂಭವಿಸಿದ್ದ ಅಪಘಾತದಲ್ಲಿ ಸಚಿವರಿಗೆ ಪೆಟ್ಟಾಗಿದ್ದು, ಅವರ ಪತ್ನಿ ಮೃತಪಟ್ಟಿದ್ದರು.

‘ನಾಯಕ್ ಅವರನ್ನು ಇನ್ನೂ 10-15ದಿನ ಆಸ್ಪತ್ರೆಯಲ್ಲಿ ಇಡಬೇಕಾಗಬಹುದು. ಆ ನಂತರವೂ ಅವರಿಗೆ ಕನಿಷ್ಠ 3-4 ತಿಂಗಳು ವಿಶ್ರಾಂತಿಯ ಅಗತ್ಯವಿದೆ’ ಎಂದು ಆಸ್ಪತ್ರೆಯ ಡೀನ್ ಡಾ.ಶಿವಾನಂದ್ ಬಂಡೇಕರ್ ಅವರು ತಿಳಿಸಿದರು.

TRENDING