ನವದೆಹಲಿ : ಹೊಸ ವಾಹನ ಖರೀದಿಸುವ ಮಾಲೀಕರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದ್ದು, ಹಳೆ ವಾಹನ ಗುಜರಿಗೆ ಹಾಕಿ ಹೊಸ ವಾಹನ ಖರೀದಿಸುವ ಮಾಲೀಕರಿಗೆ ಪ್ರೋತ್ಸಾಹಧನ ನೀಡುವ ಹೊಸ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಪರಿಸರ ಮಾಲಿನ್ಯ ಉಂಟು ಮಾಡುವ ವಾಹನಗಳನ್ನು ಗುಜರಿಗೆ ಹಾಕಿ, ಅದರ ಬದಲು ಹೊಸ ವಾಹನ ಖರೀದಿಸುವ ಮಾಲೀಕರಿಗೆ ಪ್ರೋತ್ಸಾಹಧನ ನೀಡುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.
ಅವಧಿ ಮುಗಿದ ಮುಗಿದ ವಾಹನಗಳ ಬಳಕೆ ನಾನಾ ರೀತಿಯಲ್ಲಿ ಪರಿಸರ ಮಾಲೀನ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಅಂಥ ವಾಹನಗಳನ್ನು ಬಳಕೆ ಮಾಡದಂತೆ ತಡೆಯುವುದು ಯೋಜನೆ ಉದ್ದೇಶ. ಸದ್ಯ ಭಾರತದಲ್ಲಿ ಇಂಥ 1 ಕೋಟಿ ವಾಹನಗಳಿವೆ ಎಂದು ಅಂದಾಜಿಸಲಾಗಿದ್ದು, ಇಂಥ ವಾಹನಗಳನ್ನು ಮಾರಿದವರಿಗೆ ಸರ್ಕಾರ ಪ್ರಮಾಣ ಪತ್ರ ನೀಡಲಿದ್ದು, ಹೊಸ ವಾಹನ ಖರೀದಿ ವೇಳೆ ರಿಯಾಯಿತಿ ಸಿಗಲಿದೆ ಎನ್ನಲಾಗಿದೆ.