Saturday, January 16, 2021
Home ಅಂತರ್ ರಾಜ್ಯ ಶೀಘ್ರದಲ್ಲೇ ಬಿಜೆಪಿಯ 6-7 ಸಂಸದರು ಟಿಎಂಸಿಗೆ

ಇದೀಗ ಬಂದ ಸುದ್ದಿ

ಶೀಘ್ರದಲ್ಲೇ ಬಿಜೆಪಿಯ 6-7 ಸಂಸದರು ಟಿಎಂಸಿಗೆ

ಕೋಲ್ಕತ್ತ: ಬಿಜೆಪಿಯ ಆರರಿಂದ ಏಳು ಮಂದಿ ಸಂಸದರು ಶೀಘ್ರದಲ್ಲೇ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ಪಶ್ಚಿಮ ಬಂಗಾಳದ ಆಹಾರ ಮತ್ತು ಪೂರೈಕೆ ಸಚಿವ ಜ್ಯೋತಿಪ್ರಿಯ ಮಲ್ಲಿಕ್‌ ಹೇಳಿದ್ದಾರೆ.

ಚುನಾವಣೆಗೂ ಮುನ್ನ ಮೇ ತಿಂಗಳಲ್ಲಿ ಬಿಜೆಪಿ ಸಂಸದರು ಟಿಎಂಸಿಗೆ ಸೇರಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಹಾಬರಾ ಕ್ಷೇತ್ರದ ಶಾಸಕ ಮತ್ತು ಸಚಿವ ಮಲ್ಲಿಕ್‌, ಸ್ವಾಮಿ ವಿವೇಕಾನಂದ ಜಯಂತಿಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದರು.

ಟಿಎಂಸಿ ಮಾಜಿ ಮುಖಂಡ ಮತ್ತು ಹಾಲಿ ಬಿಜೆಪಿ ಮುಖಂಡ ಸುವೆಂದು ಅಧಿಕಾರಿ ಕೋಲ್ಕತ್ತದ ಸಿಮ್ಲಾ ವೀದಿಗೆ ಭೇಟಿ ನೀಡಿದ್ದರ ಬಗ್ಗೆ ಸಚಿವರು ಪ್ರತಿಕ್ರಿಯಿಸಿದ್ದು, ‘ಅವರು ಬಿಜೆಪಿಯಲ್ಲಿ ನಾಲ್ಕೈದು ತಿಂಗಳು ಕೂಡ ಇರುವರೋ ಇಲ್ಲವೋ ಗೊತ್ತಿಲ್ಲ. ಯಾರೊಬ್ಬರೂ ಬಿಜೆಪಿಯಲ್ಲಿ ಉಳಿಯುವುದಿಲ್ಲ. ಆರರಿಂದ ಏಳು ಸಂಸದರು ಟಿಎಂಸಿಗೆ ಸೇರಲಿದ್ದಾರೆ. ಮೇ ಮೊದಲ ವಾರದಲ್ಲಿ ಟಿಎಂಸಿಗೆ ಸೇರಲಿದ್ದಾರೆ. ಬಿಜೆಪಿಗೆ ಸೇರಲು ಟಿಎಂಸಿ ತೊರೆದಿರುವವರು ಇನ್ನೂ ಸಾಲಿನಲ್ಲಿ ಕಾಯುತ್ತಿದ್ದು, ಈಗ ಟಿಎಂಸಿಗೆ ವಾಪಸ್‌ ಆಗಲು ಕೋರುತ್ತಿದ್ದಾರೆ’ ಎಂದಿದ್ದಾರೆ.

ಪಕ್ಷ ತೊರೆದಿದ್ದ ಬಾಂಕುಡಾ ಶಾಸಕ ತುಷಾರ್‌ ಬಾಬು ನಿನ್ನೆ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ ಎಂದಿದ್ದಾರೆ.

TRENDING