ಚಿಕ್ಕಬಳ್ಳಾಪುರ : ಇತ್ತಿಚೆಗೆ ಮಾನವೀಯ ಸಂಬಂದಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಕೋಳಿ, ಕುರಿ ಮಾದರಿಯಲ್ಲಿ ಕತ್ತು ಸೀಳಿ ಸಾಯಿಸಿ ಮಾನವ ಕುಲಕ್ಕೆ ಕಳಂಕ ತಂದಿರುವ ಘಟನೆಯೊಂದು ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ನಡೆದಿದೆ ಅದು ಎಲ್ಲಿ ಹೇಗೆ ಅಂತೀರಾ ಈ ಸ್ಟೋರಿ ನೋಡಿ ಗೊತ್ತಾಗುತ್ತೆ
ಅರಣ್ಯದಲ್ಲಿ ತಿರುಗಾಡೋ ಮೃಗಗಳಿಗಾದರೂ ಮಕ್ಕಳು ಕಂಡರೆ ಕೊಲ್ಲೋಕೆ ಒಂದು ಕ್ಷಣ ಯೋಚನೆ ಮಾಡುತ್ವೆ ಅಂತಾರೆ ಅದ್ರೆ ಎಲ್ಲ ಪ್ರಾಣಿಗಳಿಗೂ ಮೀರಿದ ಬುದ್ದಿವಂತ ಮನುಷ್ಯ ಅನ್ನೋ ಪ್ರಾಣಿ ಯಾಕೆ ಅವುಗಳಿಗಿಂತಲೂ ಕೀಳಾಗಿ ವರ್ತನೆ ಮಾಡ್ತಿದ್ಸಾನೋ ಗೋತ್ತಾಗ್ತಿಲ್ಲ.ತಂದೆಗೆ ಸಮನಾದ ಚಿಕ್ಕಪ್ಪನೆ ಮಗಳ ಸಮಾನ ಹೆಣ್ಣುಮಗಳನ್ನು ಕೊಂದು ತನ್ನ ರಾಕ್ಷಸ ರೂಪ ಪ್ರದರ್ಶನ ಮಾಡಿದ್ದಾನೆ.
ಹೌದು ಇದು ಸತ್ಯ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ಸರಹದ್ದು ಅಂಗರೇಕನಹಳ್ಳಿ ಗ್ರಾಮದಲ್ಲಿ ಅಂಗವಿಕಲೆಯಾದ ಕ್ರಿಷ್ಣಮೂರ್ತಿಯವರ
5 ವರ್ಷದ ಹೆಣ್ಣು ಮಗಳು ಶಾನ್ವಿತಾ ಅನ್ನೋ ಅಂಗವಿಕಲೆಯನ್ನ ಮಗುವಿನ ಚಿಕ್ಕಪ್ಪ ಶಂಕರಪ್ಪ ಕತ್ತು ಕೊಯ್ದು ಸಾಯಿಸಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.ಹೆಣ್ಣುವನ್ನ ಕೊಂದು ಪರಾರಿಯಾಗಿರುವ ಮಾಹಿತಿ ತಿಳಿದ ಕೂಡಲೆ
ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷ ಪ್ರಶಾಂತ್ ಮತ್ತು ಗ್ರಾಮಾಂತರ ಪಲೀಸರು ಸ್ಥಳಕ್ಕೆ ತೆರಳಿದ್ದು ಪರಾರಿಯಾಗಿರುವ ಚಿಕ್ಕಪ್ಪ ಶಂಕರಪ್ಪನ ಹುಡುಕಾಟಕ್ಕೆ ಮುಂದಾಗಿದ್ದಾರೆ .
ಕೆ.ಎಸ್.ನಾರಾಯಣಸ್ವಾಮಿ
ದಿ ನ್ಯೂಸ್ 24 kannada
ಚಿಕ್ಕಬಳ್ಳಾಪುರ.