Tuesday, January 26, 2021
Home ಬೆಂಗಳೂರು ರಿಲ್ಯಾಕ್ಸ್ ಮೂಡ್ ನಲ್ಲಿ ಮಸಾಲೆ ದೋಸೆ ಸವಿದ ಸಿಎಂ ಬಿ.ಎಸ್.ವೈ

ಇದೀಗ ಬಂದ ಸುದ್ದಿ

ರಿಲ್ಯಾಕ್ಸ್ ಮೂಡ್ ನಲ್ಲಿ ಮಸಾಲೆ ದೋಸೆ ಸವಿದ ಸಿಎಂ ಬಿ.ಎಸ್.ವೈ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯ ಒತ್ತಡದ ನಡುವೆಯೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಿಲ್ಯಾಕ್ಸ್ ಮೂಡ್​​ಗೆ ಜಾರಿದ್ದು, ಜನಾರ್ದನ ಹೋಟೆಲ್​​ನಲ್ಲಿ ದೋಸೆ ಸವಿದಿದ್ದಾರೆ.

ಬನಶಂಕರಿಯಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಬೆಂಗಳೂರು ನಗರ ಜಿ. ಪಂ. ಕೆಡಿಪಿ ಸಭೆ ನಡೆಸಿದ ಸಿಎಂ ಬಳಿಕ ನಿವಾಸಕ್ಕೆ ಮರಳುವ ಮಾರ್ಗ ಮಧ್ಯೆ ಶಿವಾನಂದ ವೃತ್ತದಲ್ಲಿರುವ ಜನಾರ್ದನ ಹೋಟೆಲ್​​ಗೆ ಭೇಟಿ ನೀಡಿದ್ದರು.

ಸಿಎಂಗೆ ಕಂದಾಯ ಸಚಿವ ಆರ್.ಅಶೋಕ್, ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ , ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಕಾರ್ತಿಕ್ ಸಾಥ್ ನೀಡಿ ಜೊತೆಯಲ್ಲಿ ದೋಸೆ ಸವಿದಿದ್ದಾರೆ.

ದಿ ನ್ಯೂಸ್24 ಕನ್ನಡ

TRENDING