ನವದೆಹಲಿ: ವಾಟ್ಸ್ ಆಪ್ ಬಳಕೆದಾರರು ತಮ್ಮ ಖಾಸಗಿ ಸಂದೇಶಗಳು ಸರ್ಚ್ ಇಂಜಿನ್ ನಲ್ಲಿ ಸೋರಿಕೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿರುವ ನಡುವೆಯೇ ಫೇಸ್ ಬುಕ್ ಮಾಲೀಕತ್ವದ ಮೆಸೇಂಜಿಂಗ್ ಸರ್ವೀಸ್ ಮತ್ತೊಂದು ಸ್ಪಷ್ಟನೆ ನೀಡಿದೆ. ಫೇಸ್ ಬುಕ್ ನೊಂದಿಗೆ ಖಾಸಗಿ ಸಂದೇಶಗಳು ಅಥವಾ ಸೂಕ್ಷ್ಮ ಸ್ಥಳ ದತ್ತಾಂಶಗಳನ್ನು ಹಂಚಿಕೊಳ್ಳುವುದಿಲ್ಲ ಎಂದು ಪುನರುಚ್ಚರಿಸಿದೆ, ಆದರೆ ಸಾಮಾಜಿಕ ನೆಟ್ ವರ್ಕ್ ನೊಂದಿಗೆ ಹೋಸ್ಟ್ ಮಾಡಲಾದ ಕೆಲವು ವ್ಯಾಪಾರ ಸಂಭಾಷಣೆಗಳನ್ನು ಓದಲು ಮತ್ತು ಜಾಹೀರಾತಿಗಾಗಿ ಬಳಸಬಹುದಾಗಿದೆ ಎಂದು ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಪರಿಷ್ಕೃತ ನೀತಿಯಲ್ಲಿ ಬದಲಾವಣೆ ಮಾಡಿರುವ ವಾಟ್ಸ್ ಆಪ್ , ‘ಸ್ನೇಹಿತರು ಅಥವಾ ಕುಟುಂಬದೊಂದಿಗೆ ಸಂದೇಶಗಳ ಗೌಪ್ಯತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಹೇಳಿದೆ. ಬದಲಿಗೆ, ಈ ಅಪ್ ಡೇಟ್ ನಲ್ಲಿ ವ್ಯವಹಾರವನ್ನು ವಾಟ್ಸಾಪ್ ನಲ್ಲಿ ಸಂದೇಶ ನೀಡುವ ಸಂಬಂಧ ದಲ್ಲಿ ಬದಲಾವಣೆಗಳಾಗುತ್ತವೆ’ ಎಂದು ತಿಳಿಸಿದೆ.
ನಿಮ್ಮ ಖಾಸಗಿ ಸಂದೇಶಗಳನ್ನು ವಾಟ್ಸಾಪ್ ನೋಡುವುದಿಲ್ಲ ಅಥವಾ ನಿಮ್ಮ ಕರೆಗಳನ್ನು ಕೇಳಿಸಿಕೊಳ್ಳುವುದಿಲ್ಲ ಮತ್ತು ಫೇಸ್ ಬುಕ್ ಕೂಡ ಇದನ್ನು ಮಾಡಲು ಸಾಧ್ಯವಿಲ್ಲ.
- ಇದಲ್ಲದೇ ಯಾರು ಯಾರಿಗೆ ಮೆಸೇಜಿಂಗ್ ಮಾಡುತ್ತಿದ್ದಾರೆ, ಕರೆ ಮಾಡುತ್ತಿದ್ದಾರೆ ಎಂಬ ಲಾಗ್ ಗಳನ್ನು ವಾಟ್ಸ್ ಆಪ್ ಇಟ್ಟುಕೊಂಡಿರುತ್ತದೆ.
- ನಿಮ್ಮ ಸ್ಥಳವನ್ನು ವಾಟ್ಸಾಪ್ ನೋಡುವುದಿಲ್ಲ ಮತ್ತು ಫೇಸ್ ಬುಕ್ ಕೂಡ ಸಾಧ್ಯವಿಲ್ಲ.
- ವಾಟ್ಸಾಪ್ ನಿಮ್ಮ ಸಂಪರ್ಕಗಳನ್ನು ಫೇಸ್ ಬುಕ್ ನೊಂದಿಗೆ ಹಂಚಿಕೊಳ್ಳುವುದಿಲ್ಲ.
- ವಾಟ್ಸ್ ಆಯಪ್ ಗ್ರೂಪ್ ಗಳು ಖಾಸಗಿಯಾಗಿಯೇ ಉಳಿಯುತ್ತವೆ.
- ನಿಮ್ಮ ಸಂದೇಶಗಳನ್ನು ನೀವು ಮರೆಮಾಡಲು ಹೊಂದಿಸಬಹುದು.
- ನಿಮ್ಮ ಡೇಟಾವನ್ನು ನೀವು ಡೌನ್ ಲೋಡ್ ಮಾಡಿಕೊಳ್ಳಬಹುದು
- ‘ನಾವು ಈ ಡೇಟಾವನ್ನು ಜಾಹೀರಾತುಗಳಿಗಾಗಿ ಫೇಸ್ ಬುಕ್ ನೊಂದಿಗೆ ಹಂಚಿಕೊಳ್ಳುವುದಿಲ್ಲ. ಮತ್ತೆ, ಈ ಖಾಸಗಿ ಚಾಟ್ ಗಳು ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಆಗಿರುತ್ತವೆ, ಆದ್ದರಿಂದ ಅವುಗಳ ವಿಷಯವನ್ನು ನಾವು ನೋಡುವುದಿಲ್ಲ ಅಂತ ತಿಳಿಸಿದೆ.