Sunday, January 24, 2021
Home ಸುದ್ದಿ ಜಾಲ 'LPG'ಗ್ರಾಹಕರಿಗೆ ಸಿಹಿ ಸುದ್ದಿ

ಇದೀಗ ಬಂದ ಸುದ್ದಿ

‘LPG’ಗ್ರಾಹಕರಿಗೆ ಸಿಹಿ ಸುದ್ದಿ

ನವದೆಹಲಿ: ನೀವು ಇತ್ತೀಚಿಗೆ ನೀವಿರುವ ಸ್ಥಳವನ್ನ ಬದಲಾಯಿಸಿದ್ದೀರಾ? ಅಥ್ವಾ ಸ್ಥಳ ಬದಲಾಯಿಸಲು ನಿರ್ಧರಿಸುತ್ತೀರಾ? ಹೌದು, ಅನ್ನೋದಾದ್ರೆ ನಿಮಗಿದು ನಿಜಕ್ಕೂ ಗುಡ್‌ ನ್ಯೂಸ್. ಯಾಕಂದ್ರೆ, ಇನ್ಮುಂದೆ ಇಂಡಿಯನ್ ಆಯಿಲ್ ಸಣ್ಣ ಅಂದ್ರೆ 5 ಕೆಜಿ ಎಫ್ಟಿಎಲ್ (ಫ್ರೀ ಟ್ರೇಡ್ ಎಲ್ಪಿಜಿ) ಸಿಲಿಂಡರ್‌ʼಗೆ ಗ್ರಾಹಕರ ವಿಳಾಸದ ಪುರಾವೆ ಅಗತ್ಯವಿಲ್ಲ.

ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದೇ ನಗರದಲ್ಲಿ ಎಫ್‌ಟಿಎಲ್ ಸಿಲಿಂಡರ್ ಬಳಸಬಹುದು. ಪಿಒಎಸ್‌ನಿಂದ ಸಿಲಿಂಡರ್‌ಗಳನ್ನು ಖರೀದಿಸಿದರೆ, ಗ್ರಾಹಕರು ಬಳಕೆಯ ಅವಧಿಯನ್ನು ಲೆಕ್ಕಿಸದೆ ಪ್ರತಿ ಸಿಲಿಂಡರ್‌ಗೆ ನಿಗದಿತ 500 ರೂ.ಗಳೊಂದಿಗೆ ಮರಳಿ ಖರೀದಿಸುವ ಆಯ್ಕೆಯನ್ನ ಹೊಂದಿತ್ತೀರಿ.

– ತನ್ನ ಗ್ರಾಹಕರ ಅಗತ್ಯತೆಗಳನ್ನ ಪೂರೈಸಲು ಇಂಡಿಯನ್ ಆಯಿಲ್ʼನಿಂದ 5 ಕೆಜಿ ಎಫ್ಟಿಎಲ್ (ಫ್ರೀ ಟ್ರೇಡ್ ಎಲ್ಪಿಜಿ) ಸಿಲಿಂಡರ್ಗಳನ್ನು ಮಾರಾಟ ಮಾಡುತ್ತದೆ.

– ವಿಳಾಸ ಪುರಾವೆ ಅಗತ್ಯವಿಲ್ಲ. ಸರ್ಕಾರದ ಮಾನ್ಯತೆ ಪಡೆದ ಯಾವುದೇ ಪುರಾವೆಗಳನ್ನ ಸಲ್ಲಿಸುವ ಮೂಲಕ ಗ್ರಾಹಕರು 5 ಕೆಜಿ ಎಫ್‌ಟಿಎಲ್ ಸಿಲಿಂಡರ್‌ಗಳನ್ನ ಪಡೆಯಬಹುದು.

– 5 ಕೆಜಿ ಎಫ್‌ಟಿಎಲ್ ಸಿಲಿಂಡರ್ ಖರೀದಿಸಲು ಯಾವುದೇ ಭದ್ರತಾ ಠೇವಣಿ ಅಗತ್ಯವಿಲ್ಲ.

– ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಈ ಸೌಲಭ್ಯ ಲಭ್ಯವಿದೆ. ನಿಮ್ಮ ಪ್ರದೇಶದ ಇಂಡೇನ್ ವಿತರಕರಿಂದ ನೀವು ಇದನ್ನ ಪಡೆಯಬಹುದು ಅಥವಾ ಇಂಡಿಯನ್ ಆಯಿಲ್ ಚಿಲ್ಲರೆ ಮಾರಾಟ ಮಳಿಗೆಗಳು, ಕಿರಾಣಿ ಅಂಗಡಿಗಳು ಮತ್ತು ಸ್ಥಳೀಯ ಸೂಪರ್‌ ಮಾರ್ಕೇಟ್‌ʼಗಳಂತಹ ಪಾಯಿಂಟ್ ಆಫ್ ಸೇಲ್ಸ್ ಅನ್ನ ನೇಮಿಸಬಹುದು.

– ಗ್ರಾಹಕರು ಪಾಯಿಂಟ್ ಆಫ್ ಸೇಲ್ಸ್ ಮೂಲಕ ಮನೆ ವಿತರಣೆಯನ್ನ ಪ್ರತಿ ಮರುಪೂರಣಕ್ಕೆ 25 ರೂ ಹೆಚ್ಚುವರಿ ಶುಲ್ಕವಾಗಿ ಪಡೆಯಬಹುದು.

TRENDING