Saturday, January 16, 2021
Home ಕ್ರಿಕೆಟ್ ಕ್ರೀಡೆ ಖ್ಯಾತ ಬ್ಯಾಡ್ಮಿಂಟನ್ ತಾರೆಯರಾದ ಸೈನಾ, ಪ್ರಣಯ್ ಗೆ ಕೊರೋನಾ ನೆಗಟಿವ್

ಇದೀಗ ಬಂದ ಸುದ್ದಿ

ಖ್ಯಾತ ಬ್ಯಾಡ್ಮಿಂಟನ್ ತಾರೆಯರಾದ ಸೈನಾ, ಪ್ರಣಯ್ ಗೆ ಕೊರೋನಾ ನೆಗಟಿವ್

ಬ್ಯಾಂಕಾಕ್ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಎಚ್ ಎಸ್ ಪ್ರಣಯ್ ಅವರಿಗೆ ಕೊರೋನಾ ನೆಗಟಿವ್ ಬಂದಿದ್ದು, ಇಬ್ಬರೂ ಥಾಯ್ಲೆಂಡ್ ಓಪನ್ ಗೆ ಸಜ್ಜಾಗುತ್ತಿದ್ದಾರೆ.

ಇದಕ್ಕೂ ಮುನ್ನ ಈ ಇಬ್ಬರೂ ಆಟಗಾರರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಥಾಯ್ಲೆಂಡ್ ಓಪನ್ ನಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇಬ್ಬರಿಗೂ ನೆಗಟಿವ್ ಬಂದಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಮತ್ತು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ಖಚಿತಪಡಿಸಿವೆ.

ಥಾಯ್ಲೆಂಡ್ 2021ರ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾಗೆ ಕೊರೋನಾ ಪಾಸಿಟಿವ್ ಸುದ್ದಿ ಆಘಾತ ಉಂಟು ಮಾಡಿತ್ತು. ಈ ಬಗ್ಗೆ ಸ್ವತಃ ಸೈನಾ ಟ್ವೀಟ್‌ನಲ್ಲಿ ಗೊಂದಲವನ್ನು ವ್ಯಕ್ತಪಡಿಸಿದ್ದರು.

ಸೈನಾ ನೆಹ್ವಾಲ್‌ ಹಾಗೂ ಎಚ್ ಎಸ್ ಪ್ರಣಯ್ ಅವರಿಗೆ ಕೊರೋನಾ ವೈರಸ್ ಪಾಸಿಟಿವ್ ಎಂಬುದು ಸುಳ್ಳು ವರದಿ ಎಂದು ಪ್ರಕಟಿಸಿದ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್, ಬುಧವಾರದಿಂದ ಆರಂಭವಾಗಲಿರುವ ಟೂರ್ನಿಯಲ್ಲಿ ಈ ಇಬ್ಬರೂ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

TRENDING