ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆ ನಾಳೆ (ಬುಧವಾರ) ಮಧ್ಯಾಹ್ನ 3;30ಕ್ಕೆ ನೆಡೆಯಲಿದೆ, ಏಳರಿಂದ ಎಂಟು ಮಂದಿ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ಪ್ರಮಾಣ ವಚನ ಸ್ವೀಕಾರ ನಡೆಸಲಿರುವ ಸಚಿವರಿಗೆ ರಾಜಭವನಕ್ಕೆ ಬರಲು ತಿಳಿಸಲಾಗಿದ್ದು ಅಂತೆಯೇ ಮಧ್ಯಾಹ್ನ 3;30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಈಗಾಗಲೇ ಒಬ್ಬ ಸಚಿವರನ್ನು ಕೈಬಿಡುವ ಕುರಿತು ಚರ್ಚೆಗಳು ನಡೆಯುತ್ತಿವೆ, ಇಂದು ಸಂಜೆ ಅಥವಾ ನಾಳೆ ನೂತನ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದೆಂದು ತಿಳಿಸಿದ್ದಾರೆ.