Friday, January 22, 2021
Home ಸುದ್ದಿ ಜಾಲ 'ಲಸಿಕೆ ಪಡೆದ ಮೇಲೆ ಹೆಚ್ಚು ಕಮ್ಮಿ ಆದರೆ ಪರಿಹಾರ ಮೊತ್ತ ನೀಡಬೇಕು': ಸರ್ಕಾರಕ್ಕೆ ನೌಕರರ ಮನವಿ

ಇದೀಗ ಬಂದ ಸುದ್ದಿ

‘ಲಸಿಕೆ ಪಡೆದ ಮೇಲೆ ಹೆಚ್ಚು ಕಮ್ಮಿ ಆದರೆ ಪರಿಹಾರ ಮೊತ್ತ ನೀಡಬೇಕು’: ಸರ್ಕಾರಕ್ಕೆ ನೌಕರರ ಮನವಿ

 ಬೆಂಗಳೂರು : ಕೊರೊನಾ ಲಸಿಕೆ ಪಡೆದ ಮೇಲೆ ಏನಾದರೂ ಹೆಚ್ಚು ಕಮ್ಮಿ ಆದರೆ ಸರ್ಕಾರ ಪರಿಹಾರದ ಮೊತ್ತ ನೀಡಬೇಕು ಎಂದು ರಾಜ್ಯ ಸರ್ಕಾರಿ ನೌಕರರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೊರೊನಾ ಲಸಿಕೆ ಹಂಚಿಕೆ ಆರಂಭವಾದ ಬೆನ್ನಲ್ಲೇ ಈ ಪ್ರಶ್ನೆ ಉದ್ಬವಿಸಿದೆ. ಕೊರೊನಾ ಕರ್ತವ್ಯ ನಿರ್ವಹಿಸುವಾಗ ಸಾವನ್ನಪ್ಪಿದರೆ ಕೇಂದ್ರದಿಂದ 30 ಲಕ್ಷ ರೂ ಪರಿಹಾರ ಘೋಷಣೆ ಮಾಡಲಾಗಿತ್ತು, ಇದೀಗ ಅದೇ ಪರಿಹಾರ , ಲಸಿಕೆ ಪಡೆಯುವಾಗಲೂ ಅನ್ವಯಿಸುವಂತೆ ಮಾಡಿ , ಲಸಿಕೆ ಪಡೆದ ಮೇಲೆ ಏನಾದರೂ ಹೆಚ್ಚು ಕಮ್ಮಿ ಆದರೆ ಹಿಂದೆ ಘೋಷಣೆ ಮಾಡಿದ ಪರಿಹಾರ ಇದಕ್ಕೆ ಅನ್ವಯವಾಗುತ್ತಾ ಎಂದು ನೌಕರರು ಪ್ರಶ್ನಿಸಿದ್ದಾರೆ.

ಮೊದಲ ಹಂತದಲ್ಲಿ ಕೋವಿಡ್ ವಾರಿಯರ್ಸ್ ಗಳಿಗೆ ಲಸಿಕೆ ನೀಡುತ್ತಿರುವುದು ಖುಷಿಯ ವಿಚಾರ, ಆದರೆ ಲಸಿಕೆ ಪಡೆದ ಮೇಲೆ ಏನಾದರೂ ಆದರೆ ಸರ್ಕಾರ ಹಿಂದೆ ಘೋಷಣೆ ಮಾಡಿದ ಪರಿಹಾರ ಇದಕ್ಕೆ ಅನ್ವಯ ಮಾಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಒತ್ತಾಯಿಸಿದೆ.

ಈಗಾಗಲೇ ಲಸಿಕೆ ಫಲಾನುಭವಿಗಳ ಆಯ್ಕೆ ಈಗಾಗಲೇ ನಡೆದಿದೆ, ರಾಜ್ಯ ಲಸಿಕೆ ವಿತರಣೆಗೆ ಸಜ್ಜಾಗಿದೆ. ದೇಶದಲ್ಲಿ ಮೊದಲ ಹಂತದಲ್ಲಿ ಒಟ್ಟು 3 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಪೊಲೀಸರಿಗೆ ಲಸಿಕೆ ನೀಡಲಾಗುತ್ತದೆ,. ಇದಕ್ಕೆ ಸಿದ್ದತೆಗಳು ಪೂರ್ಣಗೊಂಡಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

TRENDING