Tuesday, January 19, 2021
Home ಜಿಲ್ಲೆ ಕೋಲಾರ ತೈಲ ಬೆಲೆ ನಿಯಂತ್ರಿಸಲು ಕೆಂದ್ರ ಹಾಗೂ ರಾಜ್ಯ ಸರ್ಕಾರಗಳ ವಿಫಲ : ವಿನೂತನ ಪ್ರತಿಭಟನೆ ನಡೆಸಿದ...

ಇದೀಗ ಬಂದ ಸುದ್ದಿ

ತೈಲ ಬೆಲೆ ನಿಯಂತ್ರಿಸಲು ಕೆಂದ್ರ ಹಾಗೂ ರಾಜ್ಯ ಸರ್ಕಾರಗಳ ವಿಫಲ : ವಿನೂತನ ಪ್ರತಿಭಟನೆ ನಡೆಸಿದ ರೈತ ಸಂಘಗಳು

ಕೋಲಾರ : ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯಾಗುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ನಿಯಂತ್ರಿಸಲು ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಸರ್ಕಾರಗಳು ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ರೈತ ಸಂಘಟನೆ ಕಾರ್ಯಕರ್ತರು ನಗರದ ಗಾಂಧಿಭವನದಲ್ಲಿ ಬೈಕ್ಗೆ ಶವ ಸಂಸ್ಕಾರ ನಡೆಸಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

ದಿನದಿಂದ ದಿನಕ್ಕೆ ತೈಲ ಬೆಲೆ ಹೆಚ್ಚಾಗುತ್ತಿದ್ರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಣ್ಣುಮುಚ್ಚಿ ಕುಳಿತಿವೆ,  ತೈಲ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆಯಾಗಿದೆ. ಕರೋನದಿಂದ ಚೇತರಿಸಿಕೊಳ್ಳತ್ತಿರುವ ಮಾಧ್ಯಮ ವರ್ಗದ ಜನರಿಗೆ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ತ್ರೀವ ಸಂಕಷ್ಟತಂದಿದೆ ಎಂದು ರೈತ ಸಂಘಟನೆ ಕಾರ್ಯಕರ್ತರು ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ಭಾವ ಪೂರ್ಣ ಶ್ರಧಾಂಜಲಿ ಸಲ್ಲಿಸಿ ಸರ್ಕಾರಗಳು ಭೂತದಹನ ನಡೆಸಿದರು.

TRENDING