ವಾಷಿಂಗ್ಟನ್: ಟ್ವಿಟ್ಟರ್ನಲ್ಲಿ ಸದಾ ಆಯಕ್ಟಿವ್ ಇರುತ್ತಿದ್ದ ಡೊನಾಲ್ಡ್ ಟ್ರಂಪ್ಗೆ ಇದೀಗ ಟ್ವಿಟ್ಟರ್ನಿಂದ ಔಟ್ ಆಗಿದ್ದಾರೆ. ಟ್ರಂಪ್ ಟ್ವಿಟ್ಟರ್ ಖಾತೆಯನ್ನು ಟ್ವಿಟ್ಟರ್ ಖಾತೆ ಶಾಶ್ವತವಾಗಿ ತೆಗೆದುಹಾಕಿದೆ. ಶ್ವೇತಭವನದ ಮೇಲೆ ಟ್ರಂಪ್ ಅನುಯಾಯಿಗಳಿಂದ ಮುತ್ತಿಗೆಯಾದ ಹಿನ್ನೆಲೆಯಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದರ ಹಿಂದೆ ಇದ್ದಿದ್ದು ಭಾರತೀಯ ಮೂಲದ ಮಹಿಳೆಯೊಬ್ಬರ ಕೈ.
ಹೌದು, ಈ ನಿರ್ಧಾರವನ್ನು ಟ್ವಿಟ್ಟರ್ ತೆಗೆದುಕೊಳ್ಳಲು ಸಾಧ್ಯವಾಗಿದ್ದು ಭಾರತೀಯ ಮೂಲದ ಅಮೆರಿಕ ನಿವಾಸಿ ವಿಜಯಾ ಗದ್ದೆಯಿಂದಾಗಿಯೇ. 45 ವರ್ಷದ ವಿಜಯಾ ವೃತ್ತಿಯಲ್ಲಿ ಟ್ವಿಟ್ಟರ್ ಸಂಸ್ಥೆಯ ವಕೀಲೆಯಾಗಿದ್ದು, ಟ್ರಂಪ್ ಅವರ ವಿರುದ್ಧ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಟ್ವಿಟ್ಟರ್ ಸುರಕ್ಷತೆ, ದೇಶದ ಭದ್ರತೆಗೆ ತೊಂದರೆಯಾಗಲಿದೆ ಎಂದು ವಿಜಯಾ ವಾದಿಸಿದ್ದರಿಂದಲೇ ಇದು ಸಾಧ್ಯವಾಗಿದೆ.
ವಿಜಯಾ ಗದ್ದೆ ಅವರ ತಂದೆ ಭಾರತದಲ್ಲಿ ಜನಿಸಿದವರು. ಕೆಮಿಕಲ್ ಇಂಜಿನಿಯರ್ ಕೆಲಸದ ನಿಮಿತ್ತ ಅಮೆರಿಕದ ಟೆಕ್ಸಾಸ್ಗೆ ಹೋಗಿ ಅಲ್ಲಿಯೇ ಜೀವನ ಆರಂಭಿಸಿದರು. ವಿಜಯಾ ಅವರು ಹುಟ್ಟಿದ್ದು ಅದೇ ಟೆಕ್ಸಾಸ್ನಲ್ಲಿ. ಅವರ ಬಾಲ್ಯವನ್ನೂ ಅಲ್ಲಿಯೇ ಕಳೆದಿದ್ದಾರೆ. ಅದಾದ ನಂತರ ಅವರ ತಂದೆ ಈಸ್ಟ್ ಕೋಸ್ಟ್ಗೆ ಶಿರ್ಪಟ್ ಆಗಿದ್ದು, ವಿಜಯಾ ನ್ಯೂಜೆರ್ಸಿಯಲ್ಲಿ ಹೈ ಸ್ಕೂಲ್ ವಿದ್ಯಾಭ್ಯಾಸ ನಡೆಸಿದರು. ಕಾರ್ನೆಲ್ ವಿವಿ ಮತ್ತು ನ್ಯೂಯಾರ್ಕ್ ಯುನಿವರ್ಸಿಟಿ ಲಾ ಸ್ಕೂಲ್ನಲ್ಲಿ ಪದವಿ ಪಡೆದರು. ಆರಂಭದಲ್ಲಿ ಕೆಲ ಸ್ಟಾರ್ಟ್ ಅಪ್ ಕಂಪನಿಗಳಲ್ಲಿ ಕೆಲಸ ಮಾಡಿ ಅನುಭವ ಪಡೆದರು. 2011ರಲ್ಲಿ ಟ್ವಿಟ್ಟರ್ ಸಂಸ್ಥೆಯಲ್ಲಿ ಕೆಲಸ ಆರಂಭಿಸಿದರು. ಟ್ವಿಟ್ಟರ್ನಲ್ಲಿ ಕಾರ್ಪೋರೇಟ್ ವಕೀಲೆಯಾಗಿ, ನೀತಿಗಳನ್ನು ರೂಪಿಸುವ ಕೆಲಸ ನಿರ್ವಹಿಸುತ್ತಾರೆ.
2018ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ವಿಟ್ಟರ್ ಸಂಸ್ಥೆಯ ನಿಯೋಗ ಭೇಟಿಯಾದಾಗ ನಿಯೋಗದಲ್ಲಿ ವಿಜಯಾ ಕೂಡ ಇದ್ದರು. ಅವರ ಕಾರ್ಯಕ್ಷಮತೆಯ ಬಗ್ಗೆ ಅನೇಕ ಮ್ಯಾಗ್ಜಿನ್ಗಳು ಹಾಡಿ ಹೊಗಳಿ ಬರೆದಿವೆ.