ನವದೆಹಲಿ : ದೇಶಾದ್ಯಂತ ಕೊರೋನಾದ ಜೊತೆ ಜೊತೆಗೆ ಹಕ್ಕಿ ಜ್ವರ ಭೀತಿ ಹೆಚ್ಚಾಗಿದ್ದು, ಇದೀಗ ದೇಶದಲ್ಲಿ 10 ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ ಎಂದು ಕೇಂದ್ರ ಸರಕಾರ ಸೋಮವಾರ ಖಚಿಪಡಿಸಿದೆ.
ನೀರಿನ ಮೂಲಗಳು, ಹಕ್ಕಿಗಳ ಮಾರುಕಟ್ಟೆಗಳು, ಪ್ರಾಣಿ ಸಂಗ್ರಹಾಲಯಗಳು ಮತ್ತು ಕೋಳಿ ಫಾರ್ಮ್ಗಳ ಮೇಲೆ ನಿಗಾ ಇಡುವಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ಸೂಚನೆ ನೀಡಿದೆ.
ಜನವರಿ 11, 2021ರವರೆಗೆ 10 ರಾಜ್ಯಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ ಎಂದು ಕೇಂದ್ರ ಪಶುಸಂಗೋಪನಾ ಹೇಳಿದೆ. ಜನವರಿ 10ರ ವೇಳೆಗೆ ಕೇರಳ, ರಾಜಸ್ಥಾನ, ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಸೋಮವಾರದ ವೇಳೆಗೆ ದೆಹಲಿ, ಉತ್ತರಾಖಂಡ್ ಹಾಗೂ ಮಹಾರಾಷ್ಟ್ರದಲ್ಲಿಯೂ ಹಕ್ಕಿ ಜ್ವರ ದೃಢಪಟ್ಟಿದೆ.
ರಾಜ್ಯಗಳಿಗೆ ಹಕ್ಕಿ ಜ್ವರ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ತಪ್ಪು ಮಾಹಿತಿ ಹರಡದಂತೆ ತಡೆಯಲು ಸೂಚನೆ ನೀಡಲಾಗಿದೆ.
ದಿ ನ್ಯೂಸ್24 ಕನ್ನಡ