Monday, January 25, 2021
Home ಸುದ್ದಿ ಜಾಲ ಜ. 18ರ ವೇಳೆಗೆ 5 ಸ್ಮಾರ್ಟ್ ಸಿಟಿ ರಸ್ತೆಗಳನ್ನು ಪೂರ್ಣಗೊಳಿಸಲು ಸೂಚನೆ: ಆಡಳಿತಗಾರರು ಗೌರವ್...

ಇದೀಗ ಬಂದ ಸುದ್ದಿ

ಜ. 18ರ ವೇಳೆಗೆ 5 ಸ್ಮಾರ್ಟ್ ಸಿಟಿ ರಸ್ತೆಗಳನ್ನು ಪೂರ್ಣಗೊಳಿಸಲು ಸೂಚನೆ: ಆಡಳಿತಗಾರರು ಗೌರವ್ ಗುಪ್ತಾ

ಬಿಬಿಎಂಪಿ ವ್ಯಾಪ್ತಿಯ ಕೇಂದ್ರಭಾಗದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ 36 ರಸ್ತೆಗಳನ್ನು ಟೆಂಡರ್ ಶ್ಯೂರ್ ಯೋಜನೆಯಡಿ ಅಭಿವೃದ್ಧಿಗೊಳಿಸಲಾಗುತ್ತಿದ್ದು, ಜನವರಿ 18ರ ವೇಳೆಗೆ 5 ರಸ್ತೆಗಳಾದ ಹೇಯ್ಸ್ ರಸ್ತೆ, ಮ್ಯಾಗ್ರಾತ್‌ರಸ್ತೆ, ರೇಸ್ ಕೋರ್ಸ್ ರಸ್ತೆ, ವುಡ್ ಸ್ಟ್ರೀಟ್ ಹಾಗೂ ಟೇಟ್ ಲೇನ್ ರಸ್ತೆಗಳ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಿಲು ಸಿದ್ದತೆ ಮಾಡಿಕೊಳ್ಳಬೇಕು ಎಂದು ಸ್ಮಾರ್ಟ್ ಸಿಟಿ ಮುಖ್ಯಅಭಿಯಂತರರು ರಂಗನಾಥ್ ನಾಯ್ಕ್ರವರಿಗೆ ಆಡಳಿತಗಾರರು ಗೌರವ್ ಗುಪ್ತಾ ಸೂಚನೆ ನೀಡಿದರು.

ದಿನಾಂಕ:24.12.2020ರಂದು ಡಿಕೆನ್ಸನ್ ರಸ್ತೆ, ಹಲುಸೂರು ರಸ್ತೆ, ರಾಜಭವನ ರಸ್ತೆ, ಕಾಮರಾಜ ರಸ್ತೆಗಳನ್ನು ಪರಿವೀಕ್ಷಣೆ ಮಾಡಿದ ತರುವಾಯ ಹೇಯ್ಸ್ ರಸ್ತೆ, ಮ್ಯಾಗ್ರಾತ್ ರಸ್ತೆಗಳನ್ನು ಇಂದು ತಪಾಸಣೆ ಮಾಡಲಾಯಿತು. ಈ ರಸ್ತೆಗಳಲ್ಲಿ ಈಗಾಗಲೇ ರಸ್ತೆ ಪಾದಚಾರಿ ಮಾರ್ಗ ಅಭಿವೃದ್ಧಿ ಪಡಿಸಲಾಗಿದ್ದು, ಇನ್ನೂ ಡಾಂಬರೀಕರಣ ಮಾಡದೇ ಇರುವುದು ಗಮನಿಸಲಾಯಿತು. ವಾಹನ ಸವಾರರಿಗೆ ಸುಗಮ ಸಂಚಾರ ಒದಗಿಸಲು ಅತ್ಯಗತ್ಯವಾಗಿ Motorable ರಸ್ತೆಯನ್ನು ನೀಡುವುದು ಅವಶ್ಯಕವಾಗಿದ್ದು, ಈಗಾಗಲೇ ಪಾದಚಾರಿ ಮಾರ್ಗ ಅಭಿವೃದ್ಧಿ ಪಡಿಸಲಾಗಿರುವ ರಸ್ತೆಗಳಲ್ಲಿ ಕೂಡಲೆ ಡಾಂಬರೀಕರಣ ಕಾರ್ಯವನ್ನು ಕೈಗೊಳ್ಳಲು ಅಧಿಕಾರಿಗಳಿಗೆ ತಾಖೀತು ಮಾಡಿದರು.

ಪಾದಚಾರಿ ಮಾರ್ಗಕ್ಕೆ ಕರ್ಬ್ಸ್ ಅಳವಡಿಕೆ, ವಿದ್ಯುತ್ ದೀಪದ ಕಂಬಗಳು ಸೇರಿದಂತೆ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಕೂಡಲೇ ಡಾಂಬರೀಕರಣ ಪ್ರಾರಂಭಿಸಿ, ಬೀದಿ ದೀಪಗಳ ಅಳವಡಿಕೆ ಇನ್ನಿತರೆ ಬಾಕಿ ಇರುವ ಕಾರ್ಯವನ್ನು ಕೈಗೊಂಡು ಜನವರಿ 18ಕ್ಕೆ ಮೇಲೆ ತಿಳಿಸಿದ 5 ರಸ್ತೆಗಳಲ್ಲಿ  ಸಂಪೂರ್ಣ ಕಾಮಗಾರಿ ಪೂರ್ಣಗೊಸಿರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

TRENDING