Thursday, January 21, 2021
Home ಸುದ್ದಿ ಜಾಲ ಟ್ವಿಟರ್‌ʼನಲ್ಲಿ ಟ್ರಂಪ್ ಖಾತೆ ರದ್ದಾದ್ಮೇಲೆ ಪ್ರಧಾನಿ ಮೋದಿಯೇ ʼನಂಬರ್‌ ಒನ್‌ʼ..!

ಇದೀಗ ಬಂದ ಸುದ್ದಿ

ಟ್ವಿಟರ್‌ʼನಲ್ಲಿ ಟ್ರಂಪ್ ಖಾತೆ ರದ್ದಾದ್ಮೇಲೆ ಪ್ರಧಾನಿ ಮೋದಿಯೇ ʼನಂಬರ್‌ ಒನ್‌ʼ..!

ಪ್ರಧಾನಿ ಮೋದಿ ಬಹುತೇಕ ಎಲದಲ ಕಡೆಯಲ್ಲೂ ನಂಬರ್‌ ಒನ್‌ ಸ್ಥಾನದಲ್ಲಿರ್ತಾರೆ. ಯಾಕಂದ್ರೆ, ಇವ್ರಿಗಿರೋ ಫ್ಯಾನ್‌ ಫಾಲೊಯಿಂಗ್‌ ಅಂತಹದ್ದು. ಅದ್ರಂತೆ, ಸಧ್ಯ ಪ್ರಧಾನಿ ನರೇಂದ್ರ ಮೋದಿ, ಟ್ವಟರ್‌ʼನಲ್ಲಿಯೂ ಮುಂದಿದ್ದು, ಅತಿ ಹೆಚ್ಚು ಫಾಲೋವರ್ಸ್‌ ಇರುವ ರಾಜಕಾರಣಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಂದ್ಹಾಗೆ, ಇದಕ್ಕೂ ಮುಂಚೆ ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವ್ರು ಟ್ವಿಟರ್‌ʼನಲ್ಲಿ ಅತೀ ಹೆಚ್ಚು ಪಾಲೋವರ್ಸ್‌ ಹೊಂದಿದ್ರು. ಸಧ್ಯ ಟ್ವಿಟರ್‌ ಅವ್ರ ಖಾತೆಯನ್ನ ಶಾಶ್ವತವಾಗಿ ಸ್ಥಗಿತಗೊಳಿಸಿದ್ದು, 2ನೇ ಸ್ಥಾನದಲ್ಲಿದ್ದ ಪ್ರಧಾನಿ ಮೋದಿ ನಂಬರ್‌ ಒನ್‌ ಸ್ಥಾನಕ್ಕೆ ಜಿಗಿದಿದ್ದಾರೆ.

ಅಂದ್ಹಾಗೆ, ಈ ಹಿಂದೆ ಕ್ಯಾಪಿಟಲ್ ಹಿಲ್ ಘಟನೆಯ ನಂತರ ಮತ್ತಷ್ಟು ಹಿಂಸಾಚಾರದ ಭೀತಿಯಿಂದ ಟ್ವಿಟರ್, ಡೊನಾಲ್ಡ್ ಟ್ರಂಪ್ ಖಾತೆಯನ್ನ ಶಾಶ್ವತವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ.

TRENDING