Saturday, January 16, 2021
Home ಅಂತರ್ ರಾಜ್ಯ ತಮಿಳುನಾಡು ರಾಜಕೀಯ ಸೇರುವಂತೆ ಒತ್ತಾಯ ಮಾಡಬೇಡಿ : ರಜನಿಕಾಂತ್

ಇದೀಗ ಬಂದ ಸುದ್ದಿ

ರಾಜಕೀಯ ಸೇರುವಂತೆ ಒತ್ತಾಯ ಮಾಡಬೇಡಿ : ರಜನಿಕಾಂತ್

 ಚೆನ್ನೈ: ರಾಜಕೀಯ ಬರುವಂತೆ ಅಭಿಮಾನಿಗಳು ಪ್ರತಿಭಟನೆ ನಡೆಸುವ ಬಗ್ಗೆ ಮಾತನಾಡಿದ ಸೂಪರ್ ಸ್ಟಾರ್ ರಜನಿಕಾಂತ್ ಮತ್ತೆ ರಾಜಕೀಯಕ್ಕೆ ಸೇರಲು ಒತ್ತಾಯ ಮಾಡಬೇಡಿ ಎಂದು ಅಭಿಮಾನಿಗಳಿಗೆ ಸೋಮವಾರ ಮನವಿ ಮಾಡಿಕೊಂಡಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಹೊಸ ರಾಜಕೀಯ ಪಕ್ಷ ಕಟ್ಟುವ ಯೋಜನೆಯಿಂದ ತಮಿಳುನಾಡು ಸೂಪರ್‌ಸ್ಟಾರ್ ನಟ ರಜನಿಕಾಂತ್ ಹಿಂದೆ ಸರಿದಿದ್ದರು. ಇದರಿಂದ ತೀವ್ರ ನಿರಾಸೆಗೊಂಡಿರುವ ಅಭಿಮಾನಿಗಳು, ರಜನಿಕಾಂತ್ ತಮ್ಮ ನಿರ್ಧಾರ ಬದಲಾಯಿಸಿ ರಾಜಕೀಯ ಪ್ರವೇಶ ಮಾಡಬೇಕೆಂದು ಒತ್ತಾಯಿಸಿ ಚೆನ್ನೈನ ವಲ್ಲುವರ್ ಕೊಟ್ಟಂನಲ್ಲಿ ಪ್ರತಿಭಟನೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ರಜನಿಕಾಂತ್ , ನನ್ನ ಕೆಲ ಅಭಿಮಾನಿಗಳು ಹಾಗೂ ರಜಿನಿ ಮಕ್ಕಳ್ ಮಂದಿರಂನ ಉಚ್ಛಾಟಿತ ಕೆಲ ಕಾರ್ಯಕರ್ತರು ನಾನು ರಾಜಕೀಯ ಪ್ರವೇಶದಿರುವ ನಿರ್ಧಾರವನ್ನು ವಿರೋಧಿಸಿ ಚೆನ್ನೈನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಾನು ಈಗಾಗಲೇ ಈ ಕುರಿತು ನಿರ್ಧಾರ ತೆಗೆದುಕೊಂಡಿದ್ದೇನೆ. ಪದೇ ಪದೇ ಪ್ರತಿಭಟನೆ ಮಾಡಿ ನನ್ನ ಮೇಲೆ ಒತ್ತಡ ಹಾಕುವ ಮೂಲಕ ನೋವು ಕೊಡಬೇಡಿ ಎಂದು ಮನವಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

TRENDING