Monday, January 18, 2021
Home ಕೋವಿಡ್-19 ಕೊರೊನಾ ಲಸಿಕೆ ದಾಸ್ತಾನು ಕೇಂದ್ರಕ್ಕೆ ಭೇಟಿ ನೀಡಿದ ‘ಗೌರವ್ ಗುಪ್ತಾ’

ಇದೀಗ ಬಂದ ಸುದ್ದಿ

ಕೊರೊನಾ ಲಸಿಕೆ ದಾಸ್ತಾನು ಕೇಂದ್ರಕ್ಕೆ ಭೇಟಿ ನೀಡಿದ ‘ಗೌರವ್ ಗುಪ್ತಾ’

ಬಿಬಿಎಂಪಿಯ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ 1,71,000 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ಇಂದು ಆಡಳಿತಗಾರರು ಗೌರವ್ ಗುಪ್ತಾ ರವರು ದಾಸಪ್ಪ ಆಸ್ಪತ್ರೆಯಲ್ಲಿ ಲಸಿಕಾ ದಾಸ್ತಾನು ಕೇಂದ್ರಕ್ಕೆ ಭೇಟಿ ನೀಡಿ ಮಾಡಿಕೊಂಡಿರುವ ವ್ಯಸವ್ಥೆ ಬಗ್ಗೆ ಪರಿಶೀಲನೆ ನಡೆಸಿದರು.

ಲಸಿಕೆಯನ್ನು ಯಾವರೀತಿ ಸಂಗ್ರಹಿಸಿಡಲಾಗಿದೆ, ಯಾವ ರೀತಿ ಲಸಿಕೆ ನೀಡುವ ಕೇಂದ್ರಗಳಿಗೆ ಕೊಂಡೊಯ್ಯಲಾಗುತ್ತದೆ, ಯಾವ ವಿಧಾನದಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ಆಡಳಿತಗಾರರು ಕೇಳಿದರು. ಅದಕ್ಕೆ ಉಗ್ರಾಣ ವ್ಯವಸ್ಥಾಪಕರು ಪ್ರತಿಕ್ರಿಯಿಸಿ, ಪ್ರತಿ ಐಸ್‌ ಲೈನ್ ರೆಫ್ರಿಜರೇಟರ್ ಒಂದರಲ್ಲಿ 45 ಸಾವಿರ ಲಸಿಕಾ ಡೋಸ್ ಗಳನ್ನು ಇಡಬಹುದಾಗಿದ್ದು, ದಾಸಪ್ಪ ಆಸ್ಪತ್ರೆಯಲ್ಲಿ 9 ಐಸ್‌ಲೈನ್ ರೆಫ್ರಿಜರೇಟರ್‌ಗಳಿವೆ. ಅದೇ ರೀತಿ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೋಲ್ಡ್ ಚೈನ್ ಪಾಯಿಂಟ್ ಗಳಿದ್ದು, ಅಲ್ಲಿಯೂ ಐಸ್‌ಲೈನ್ ರೆಫ್ರಿಜರೇಟರ್ ಗಳಿರಲಿವೆ.

ಲಸಿಕೆ ಮುಖ್ಯ ಉಗ್ರಾಣ ಕೇಂದ್ರಕ್ಕೆ ತಲುಪಿದ ದಿನದಿಂದ ಎಲ್ಲಾ 141 ಕೋಲ್ಡ್ ಚೈನ್ ಪಾಯಿಂಟ್‌ಗಳಿಗೆ ಲಸಿಕೆಗಳನ್ನು ಕೋಲ್ಡ್ ಬಾಕ್ಸ್ನಲ್ಲಿರಿಸಿ ವಾಹನಗಳ ಮೂಲಕ ಸಾಗಾಣೆ ಮಾಡಲಾಗುತ್ತದೆ. ಪ್ರತಿಯೊಂದು ಲಸಿಕಾ ಸ್ಥಳಗಳನ್ನು ಕೋಲ್ಡ್ ಚೈನ್ ಪಾಯಿಂಟ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗದ ನೀಲನಕ್ಷೆಯನ್ನು ಸಿದ್ದಪಡಿಸಲಾಗಿದೆ. ಲಸಿಕೆ ನೀಡುವ ದಿನದಂದು ಕೋಲ್ಡ್ ಚೈನ್ ಪಾಯಿಂಟ್ ನಿಂದ ಲಸಿಕೆ ನೀಡುವ ಕೇಂದ್ರಗಳಿಗೆ ಲಸಿಕೆ ತಲುಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ದಿ ನ್ಯೂಸ್ 24 ಕನ್ನಡ

TRENDING