Tuesday, January 26, 2021
Home ಕೋವಿಡ್-19 ‘ಯುಕೆ’ನಿಂದ ಬಂದ ನಾಲ್ವರಿಗೆ ಕೋವಿಡ್‌-19 ದೃಢ

ಇದೀಗ ಬಂದ ಸುದ್ದಿ

‘ಯುಕೆ’ನಿಂದ ಬಂದ ನಾಲ್ವರಿಗೆ ಕೋವಿಡ್‌-19 ದೃಢ

ನವದೆಹಲಿ: ಏರ್‌ ಇಂಡಿಯಾ ವಿಮಾನದಲ್ಲಿ ಲಂಡನ್‌ನಿಂದ ದೆಹಲಿಗೆ ಬಂದಿಳಿದ ನಾಲ್ವರು ಪ್ರಯಾಣಿಕರಿಗೆ ಕೋವಿಡ್‌-19 ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏರ್‌ ಇಂಡಿಯಾ ವಿಮಾನವು ಭಾನುವಾರ ರಾತ್ರಿ 10.30ಕ್ಕೆ ಲಂಡನ್‌ನಿಂದ ದೆಹಲಿಗೆ ಆಗಮಿಸಿದೆ.

‘ಈ ವಿಮಾನದಲ್ಲಿ ಒಟ್ಟು 186 ಪ್ರಯಾಣಿಕರಿದ್ದರು. ಮೂರು ಗಂಟೆಗಳಲ್ಲಿ ಎಲ್ಲಾ ಪ್ರಯಾಣಿಕರ ಕೋವಿಡ್ ಪರೀಕ್ಷೆ ನಡೆಸಲಾಯಿತು. ಎಂಟು ಗಂಟೆಯೊಳಗೆ ಪ್ರಯಾಣಿಕರನ್ನು ಕಳುಹಿಸಲಾಯಿತು’ ಎಂದು ಜೆನೆಸ್ಟ್ರಿಂಗ್ಸ್‌ ಡಯಾಗ್ನೋಸ್ಟಿಕ್‌ ಸೆಂಟರ್‌ ಸಂಸ್ಥಾಪಕ ಗೌರಿ ಅಗರ್‌ವಾಲ್‌ ಹೇಳಿದ್ದಾರೆ.

ಕೊರೊನಾ ವೈರಾಣುವಿನ ಹೊಸ ಸ್ವರೂಪವು ಅಲ್ಲಿ ಪತ್ತೆಯಾದ ಕಾರಣ ಬ್ರಿಟನ್‌ಗೆ ಹೋಗುವ ಮತ್ತು ಬರುವ ಎಲ್ಲ ವಿಮಾನಗಳ ಸಂಚಾರವನ್ನು ಕಳೆದ ಡಿಸೆಂಬರ್‌ 23ರಿಂದ ಜನವರಿ 7 ರವರೆಗೆ ರದ್ದುಗೊಳಿಸಲಾಗಿತ್ತು.

TRENDING