Tuesday, January 26, 2021
Home ಸುದ್ದಿ ಜಾಲ ಮುಖ್ಯಮಂತ್ರಿಗಳು ಮಾತು ಕೊಟ್ಟರೆ ಈಡೇರಿಸುತ್ತಾರೆ: ಸಚಿವ ಆನಂದ್‌ ಸಿಂಗ್‌

ಇದೀಗ ಬಂದ ಸುದ್ದಿ

ಮುಖ್ಯಮಂತ್ರಿಗಳು ಮಾತು ಕೊಟ್ಟರೆ ಈಡೇರಿಸುತ್ತಾರೆ: ಸಚಿವ ಆನಂದ್‌ ಸಿಂಗ್‌

ಹೊಸಪೇಟೆ: ‘ಬೇರೆ ಪಕ್ಷ ಬಿಟ್ಟು ಬಿಜೆಪಿಗೆ ಬಂದ ಎಲ್ಲರಿಗೂ ಸಚಿವ ಸ್ಥಾನ ಸಿಕ್ಕಿದೆ. ಇನ್ನೂ ಕೆಲವರಿಗೆ ಕೊಡಬಹುದು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾತು ಕೊಟ್ಟಿದ್ದಾರೆ. ಸಿ.ಎಂ. ಮಾತು ಕೊಟ್ಟರೆ ಈಡೇರಿಸುತ್ತಾರೆ’ ಎಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ಭರವಸೆ ವ್ಯಕ್ತಪಡಿಸಿದರು.

‘ಸಂಪುಟ ಪುನರ್‌ರಚನೆ ಆಗುತ್ತೋ ಅಥವಾ ವಿಸ್ತರಣೆಯಾಗುತ್ತೋ ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ಸಿ.ಎಂ. ಮಾತು ಕೊಟ್ಟರೆ ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ. ಅದಕ್ಕೆ ಉತ್ತಮ ನಿದರ್ಶನ ಎಂದರೆ ವಿಜಯನಗರ ಜಿಲ್ಲೆ ರಚನೆ ಘೋಷಣೆ. ವಿಜಯನಗರ ಕ್ಷೇತ್ರದ ಉಪಚುನಾವಣೆಗೂ ಜಿಲ್ಲೆ ರಚನೆ ಸಂಬಂಧ ಭರವಸೆ ಕೊಟ್ಟಿದ್ದರು. ಅದನ್ನು ಈಗ ಈಡೇರಿಸಿದ್ದಾರೆ’ ಎಂದು ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

TRENDING