Monday, January 18, 2021
Home ರಾಜಕೀಯ ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ: ಮಿಥುನ್ ರೈ ನಾಮಪತ್ರ ವಾಪಸ್

ಇದೀಗ ಬಂದ ಸುದ್ದಿ

ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ: ಮಿಥುನ್ ರೈ ನಾಮಪತ್ರ ವಾಪಸ್

ಮಂಗಳೂರುರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಚುನಾವಣೆಗೆ ಇನ್ನು ಒಂದು ದಿನ ಬಾಕಿ ಇರುವಾಗ ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ನಾಮಪತ್ರ ವಾಪಸ್ ಪಡೆದಿದ್ದಾರೆ.

ಈ ಸಂಬಂಧ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಮಿಥುನ್ ರೈ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಲಹೆಯ ಮೇರೆಗೆ ನಾಮಪತ್ರ ವಾಪಸ್ ಪಡೆದಿರುವುದಾಗಿ ತಿಳಿಸಿದ್ದಾರೆ.

ಆತ್ಮೀಯ ಯುವ ಕಾಂಗ್ರೆಸ್ ಕಾರ್ಯಕರ್ತರೇ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಚುನಾವಣೆ 2021 ರ ಜನವರಿ 10, 11 ಮತ್ತು 12 ರಂದು ನಡೆಯಲಿದೆ. ನಾನು ಡಿಕೆ ಶಿವಕುಮಾರ್ ಅವರ ಆಪ್ತನಾಗಿದ್ದು, ಅವರ ನಿರ್ದೇಶನದಂತೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಿಂದ ನನ್ನ ನಾಮಪತ್ರ ವಾಪಸ್ ಪಡೆದುಕೊಂಡಿದ್ದೇನೆ, ನೀವೆಲ್ಲರೂ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮನವಿ ಮಾಡುತ್ತಿದ್ದೇನೆ ಎಂದು ಪೋಸ್ಟ್ ಹಾಕಿದ್ದಾರೆ.

ದಕ್ಷಿಣ ಕನ್ನಡದ ಮಿಥುನ್ ರೈ ಅವರು ಈ ಹುದ್ದೆಗೆ ಮುಂಚೂಣಿಯಲ್ಲಿದ್ದರು ಎಂದು ನೆನಪಿಸಿಕೊಳ್ಳಬಹುದು. ಬೆಂಗಳೂರಿನಿಂದ ಮೊಹಮ್ಮದ್ ನಲಪಾಡ್, ರಕ್ಷಾ ರಾಮಯ್ಯ, ಎಚ್ ಎಸ್ ಮಂಜುನಾಥ್, ಸಂದೀಪ್ ನಾಯಕ್, ಮೊಹಮ್ಮದ್ ಖಾಲಿದ್ ಮತ್ತು ಒಂಟಿ ಮಹಿಳಾ ಸ್ಪರ್ಧಿ ಭವ್ಯಾ ಕಣದಲ್ಲಿದ್ದಾರೆ.

TRENDING