Monday, January 18, 2021
Home ರಾಜ್ಯ ರಾಜ್ಯದ ಪ್ರತಿ ತಾಲೂಕಲ್ಲಿ ಎರಡು ಗೋ ಶಾಲೆ : ಪ್ರಭು ಚವ್ಹಾಣ್

ಇದೀಗ ಬಂದ ಸುದ್ದಿ

ರಾಜ್ಯದ ಪ್ರತಿ ತಾಲೂಕಲ್ಲಿ ಎರಡು ಗೋ ಶಾಲೆ : ಪ್ರಭು ಚವ್ಹಾಣ್

ಬೀದರ್ : ರಾಜ್ಯದ ಪ್ರತಿ ತಾಲೂಕುಗಳಲ್ಲಿ ಎರಡು ಗೋ ಶಾಲೆಗಳನ್ನು ಸ್ಥಾಪನೆ ಮಾಡಲು ಚಿಂತನೆ ನಡೆದಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗೋವುಗಳ ಸಂರಕ್ಷಣೆಗೆ ರಾಜ್ಯದ ಪ್ರತಿ ತಾಲೂಕಿಗೆ ಎರಡು ಗೋ ಶಾಲೆಗಳನ್ನು ಮಂಜೂರು ಮಾಡಲು ಚಿಂತನೆ ನಡೆಸಲಾಗಿದೆ. ಸದ್ಯ ಸರ್ಕಾರಿ ಮತ್ತು ಖಾಸಗಿ ಸೇರಿ 164 ಗೋ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಗೋ ಹತ್ಯೆ ಕಾಯ್ದೆ ಜಾರಿ ಹಿನ್ನೆಲೆ ಗೋವುಗಳ ಸಂರಕ್ಷಣೆಗೆ ಗೋ ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದರು.

ರಾಜ್ಯದ ಪ್ರತಿ ತಾಲೂಕಿನಲ್ಲಿ 2 ಗೋಶಾಲೆಗಳನ್ನು ಮಂಜೂರು ಮಾಡಲು ನಿರ್ಧರಿಸಲಾಗಿದ್ದು, ಗೋ ಶಾಲೆಗಳಲ್ಲಿ ಮೂಲಸೌಕರ್ಯ ಒದಗಿಸಲು ಕ್ರಮ ವಹಿಸಲಾಗುವುದು. ಜಾನುವಾರಗಳ ಸಂರಕ್ಷಣೆ, ರೈತರು ಮತ್ತು ಸಾಕಣೆದಾರರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದರು.

TRENDING