Tuesday, January 19, 2021
Home ಸುದ್ದಿ ಜಾಲ ಕೊರೊನಾ ಭೀತಿಯ ನಡುವೆ ಈಗ 'ಹಕ್ಕಿ ಜ್ವರ'ದ ಕಾಟ

ಇದೀಗ ಬಂದ ಸುದ್ದಿ

ಕೊರೊನಾ ಭೀತಿಯ ನಡುವೆ ಈಗ ‘ಹಕ್ಕಿ ಜ್ವರ’ದ ಕಾಟ

ಸದ್ಯಕ್ಕೆ ರಾಜ್ಯದಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿಲ್ಲ. ಹಾಗಂತ ಮುಂಜಾಗ್ರಾತಾ ಕ್ರಮ ವಹಿಸದೇ ಇದ್ದರೇ ಹಕ್ಕಿ ಜ್ವರ ಬರೋದಿಲ್ಲ ಅಂತ ಹೇಳೋಕೂ ಆಗೋದಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಕೂಡ ಹೊರ ರಾಜ್ಯಗಳಿಂದ ಬರುವಂತ ಗಡಿಗಳಲ್ಲಿ ಅಲರ್ಟ್ ಘೋಷಿಸಿದೆ. ಅದರಲ್ಲೂ ಹಕ್ಕಿ ಜ್ವರ ಕಾಣಿಸಿಕೊಂಡಿರುವಂತ ಕೇರಳ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಿಂದ ಆಗಮಿಸುವ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಇದರ ಮಧ್ಯೆಯೂ ಹಕ್ಕಿ ಜ್ವರದ ಭೀತಿಯಿಂದ ಮೊದಲ ಪರಿಣಾಮ ಭೀರಿರೋದು ಕೋಳಿಗಳ ಮಾರಾಟದ ಮೇಲೆ ಆಗಿದೆ.

ಹೌದು.. ಹಕ್ಕಿ ಜ್ವರ ಬಂತು ಅಂದ್ರೆ.. ಮೊದಲು ಅದರ ಪರಿಣಾಮ ಕಾಣಿಸಿಕೊಳ್ಳೋದು ಕೋಳಿ ಮಾಂಸದ ಮಾರಾಟದ ಮೇಲೆ. ಕೆಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಹರಡುವಿಕೆಯ ಕಾರಣದಿಂದಾಗಿ ಕೇರಳದ ತಿರುವನಂತಪುರಂನಲ್ಲಿ ಕೋಳಿ ಮಾರಾಟದ ಮೇಲೆ ಪರಿಣಾಮ ಬೀರಿದೆ. ಮೊದಲೇ ಕೊರೊನಾ ಕಾರಣದಿಂದಾಗಿ ವ್ಯಾಪಾರವು ಕಡಿಮೆಯಾಗಿತ್ತು, ಈಗ ಕಳೆದ ಎರಡು ವಾರಗಳಿಂದ ಹಕ್ಕಿ ಜ್ವರ ಕಂಡುಬಂದಿದ್ದು, ಮತ್ತಷ್ಟು ನಷ್ಟವಾಗಿದೆ ಎಂಬುದಾಗಿ ಅನೇಕ ಮಾರಾಟಗಾರರ ಮಾತಾಗಿದೆ.

ಮತ್ತೊಂದೆಡೆ ಮನಕಲಕುವಂತೆ ಇತ್ತೀಚೆಗೆ ಕಾನ್ಪುರದ ಮೃಗಾಲಯದಲ್ಲಿ ಹಕ್ಕಿಗಳು ಸತ್ತು ಬಿದ್ದಿದ್ದವು. ಇಂತಹ ಪಕ್ಷಿಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಇದರಲ್ಲಿ ಎರಡು ಹುಂಜಗಳಿಗೆ ಎಚ್-5 ಸೋಂಕು ತಗುಲಿದ್ದು ದೃಢಪಟ್ಟಿದೆ. ಇದೇ ಕಾರಣದಿಂದಾಗಿ, ಮೃಗಾಲಯದಲ್ಲಿನ ಕೆಂಪು ಹುಂಜಗಳು (ಕಾಡು ಕೋಳಿಗಳು) ಹಾಗೂ ಇತರ ಎಲ್ಲಾ ಪ್ರಭೇದದ ಹಕ್ಕಿಗಳನ್ನು ಕೊಲ್ಲಲು ಕಾನ್ಪುರ ಮೃಗಾಲಯದ ಆಡಳಿತವು ಆದೇಶಿಸಿದೆ.

ಕೊರೋನಾ ಸೋಂಕಿನ ಭೀತಿ ಕಡಿಮೆ ಆಯ್ತು ಅಂತ ಖುಷಿಯಲ್ಲಿದ್ದಾಗಲೇ, ಬ್ರಿಟನ್ ಕೊರೋನಾ ರೂಪಾಂತರ ವೈರಸ್ ಸೋಂಕಿನ ಭೀತಿ ವಿಶ್ವದೆಲ್ಲಡೆ ತಟ್ಟಿತ್ತು. ಭಾರತಕ್ಕೂ ಕಾಲಿಟ್ಟು, ರಾಜ್ಯಕ್ಕೂ ಕಾಲಿಟ್ಟಿದೆ. ಇದೀಗ ಕೊರೋನಾ, ಯುಕೆ ವೈರಸ್ ಸೋಂಕಿನ ಭೀತಿಯ ನಡುವೆ ಹಕ್ಕಿ ಜ್ವರದ ಭೀತಿ ಆರಂಭಗೊಂಡಿದೆ. ಇದರ ಎಫೆಕ್ಟ್ ಕುಕ್ಕಟೋದ್ಯಮಕ್ಕೆ ಬೀಳೋ ಮುನ್ನಾ ಆಯಾ ರಾಜ್ಯಗಳು ಮುಂಜಾಗ್ರತಾ ಕ್ರಮ ಕೈಗೊಂಡು, ವ್ಯಾಪಕವಾಗಿ ಹರಡೋದನ್ನು ತಡೆಯಲಿ ಎಂಬುದು ನಮ್ಮ ಆಶಯ ಕೂಡ ಆಗಿದೆ.

TRENDING