Sunday, January 24, 2021
Home ಸುದ್ದಿ ಜಾಲ `SBI' ಗ್ರಾಹಕರಿಗೆ ಮಹತ್ವದ ಮಾಹಿತಿ

ಇದೀಗ ಬಂದ ಸುದ್ದಿ

`SBI’ ಗ್ರಾಹಕರಿಗೆ ಮಹತ್ವದ ಮಾಹಿತಿ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ತನ್ನ ಗ್ರಾಹಕರಿಗೆ ಬ್ಯಾಂಕಿಂಗ್ ವಂಚನೆ ತಪ್ಪಿಸಲು ಎಚ್ಚರಿಕೆಗಳನ್ನ ನೀಡಿದೆ. ಯಾವುದೇ ಬ್ಯಾಂಕಿಂಗ್ ವಂಚನೆಯನ್ನ ತಪ್ಪಿಸಲು ಗ್ರಾಹಕರು ತಮ್ಮ ಎಟಿಎಂಗಳನ್ನ ಸಂಪೂರ್ಣ ಗೋಪ್ಯವಾಗಿ ವ್ಯವಹರಿಸಬೇಕು ಎಂದು ಎಸ್ ಬಿಐ ಗ್ರಾಹಕರಿಗೆ ಸಲಹೆ ನೀಡಿದೆ. ಎಟಿಎಂನಿಂದ ಹಣ ಡ್ರಾ ಮಾಡುವುದು ಸುಲಭ ಮತ್ತು ಅನುಕೂಲಕರ. ಆದರೆ, ವಂಚನೆಯ ಸುದ್ದಿಗಳು ಸದಾ ಸುದ್ದಿ ಮಾಡುತ್ವೆ. ಇಂತಹ ಸನ್ನಿವೇಶದಲ್ಲಿ, ಸುರಕ್ಷಿತ ರೀತಿಯಲ್ಲಿ ಡೆಬಿಟ್ ಅಥವಾ ಎಟಿಎಂ ಕಾರ್ಡ್ ಬಳಸುವುದು ಮತ್ತು ಎಟಿಎಂನಿಂದ ವಹಿವಾಟು ನಡೆಸುವಾಗ ಎಚ್ಚರ ವಹಿಸುವುದು ಬಹಳ ಮುಖ್ಯ. ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ತನ್ನ ಗ್ರಾಹಕರನ್ನ ಸುರಕ್ಷಿತವಾಗಿಡಲು ಕೆಲವು ಮಾರ್ಗಗಳನ್ನು ನೀಡಿದೆ.

ಈ ಬಗ್ಗೆ ಟ್ವೀಟ್ ಮಾಡಿದ ಎಸ್ ಬಿಐ, ‘ನಿಮ್ಮ ಎಟಿಎಂ ಕಾರ್ಡ್ ಮತ್ತು ಪಿನ್ ಬಹಳ ಮುಖ್ಯ. ನಿಮ್ಮ ಹಣವನ್ನ ಸುರಕ್ಷಿತವಾಗಿಡಲು ಕೆಲವು ಸಲಹೆಗಳು ಇಲ್ಲಿವೆ.’

1) ಎಟಿಎಂ-ಕಮ್-ಡೆಬಿಟ್ ಕಾರ್ಡ್ ವಂಚನೆಯನ್ನ ತಪ್ಪಿಸಲು ಎಟಿಎಂ ವಹಿವಾಟುಗಳನ್ನ ಸಂಪೂರ್ಣ ಗೋಪ್ಯವಾಗಿ ಮಾಡಬೇಕು.

2) ಎಟಿಎಂ ಅಥವಾ ಪಿಓಎಸ್ ಮಷೀನ್ʼನಲ್ಲಿ ಎಟಿಎಂ ಕಾರ್ಡ್ ಬಳಸುವಾಗ ಕೈಯಿಂದ ಕೀಪ್ಯಾಡ್ ಕವರ್ ಮಾಡಿ.

3) ನಿಮ್ಮ ಪಿನ್ ಅಥವಾ ಕಾರ್ಡ್ ವಿವರಗಳನ್ನ ಎಂದಿಗೂ ಹಂಚಿಕೊಳ್ಳಬೇಡಿ.

4) ನಿಮ್ಮ ಕಾರ್ಡ್ʼನಲ್ಲಿ ಪಿನ್ ಬರೆಯಬೇಡಿ. ಕಾರ್ಡ್ ವಿವರಗಳು ಅಥವಾ ಪಿನ್ʼಗಳನ್ನು ಕೇಳಲಾಗುವ ಪಠ್ಯ ಸಂದೇಶಗಳು, ಇಮೇಲ್ʼಗಳು ಮತ್ತು ಕರೆಗಳಿಗೆ ಉತ್ತರಿಸಬೇಡಿ.

5) ನಿಮ್ಮ ಪ್ರಸಕ್ತ ಮೊಬೈಲ್ ಸಂಖ್ಯೆ ಬ್ಯಾಂಕಿನಲ್ಲಿ ನೋಂದಾಯಿಸಲಾಗಿದೆ ಎಂಬುದನ್ನ ಖಚಿತಪಡಿಸಿಕೊಳ್ಳಿ, ಇದರಿಂದ ನಿಮ್ಮ ಎಲ್ಲಾ ವ್ಯವಹಾರಗಳಿಗೆ ನೀವು ಎಚ್ಚರಿಕೆಗಳನ್ನ ಸ್ವೀಕರಿಸಬಹುದು.

6) ಎಟಿಎಂ / ಡೆಬಿಟ್ ಕಾರ್ಡ್ ಕಳೆದು ಹೋದರೆ ಅಥವಾ ಕಳುವಾದರೆ, ಕೂಡಲೇ ಬ್ಯಾಂಕಿಗೆ ಮಾಹಿತಿ ನೀಡಿ, ಯಾವುದೇ ಅನಧಿಕೃತ ವಹಿವಾಟುಗಳನ್ನ ವರದಿ ಮಾಡಿ.

7) ವಹಿವಾಟಿನ ಎಸ್ ಎಂಎಸ್ ಮತ್ತು ಬ್ಯಾಂಕ್ ಸ್ಟೇಟ್ ಮೆಂಟ್ ಅನ್ನ ನಿಯಮಿತವಾಗಿ ಪರಿಶೀಲಿಸಿ.

8) ಡೆಬಿಟ್ ಮೊತ್ತಕ್ಕಾಗಿ ನಿಮ್ಮ ಫೋನ್ʼಗೆ ಎಸ್ ಎಂಎಸ್ ಹೋಗುತ್ತೆ ಅದನ್ನ ತಕ್ಷಣ ಪರೀಕ್ಷಿಸಿ.

9) ಎಟಿಎಂ ಬಳಸಲು ಯಾರ ಸಹಾಯವನ್ನೂ ತೆಗೆದುಕೊಳ್ಳಬೇಡಿ ಅಥವಾ ನಿಮ್ಮ ಕಾರ್ಡ್ʼನ್ನ ಯಾರಿಗೂ ಕೊಡಬೇಡಿ.

10) ವ್ಯವಹಾರ ಮಾಡುವಾಗ ಮೊಬೈಲ್ ಫೋನ್ʼನಲ್ಲಿ ಮಾತನಾಡಬೇಡಿ.

ಡೆಬಿಟ್ ಕಾರ್ಡ್ ಬಳಕೆದಾರರಿಗಾಗಿ ಬ್ಯಾಂಕ್ ಇತ್ತೀಚೆಗೆ ಹೊಸ ಸೌಲಭ್ಯವನ್ನ ಪರಿಚಯಿಸಿದೆ. ನಿಮ್ಮ ವಹಿವಾಟುಗಳನ್ನ ಸುರಕ್ಷಿತವಾಗಿರಸುವ ಸಲುವಾಗಿ ಎಸ್ ಬಿಐ 2020ರ ಸೆಪ್ಟೆಂಬರ್ 18ರಿಂದ ದೇಶದ ಎಲ್ಲ ಎಟಿಎಂಗಳಲ್ಲಿ 10 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಹಣ ಹಿಂತೆಗೆತಕ್ಕೆ ಒನ್ ಟೈಮ್ ಪಾಸ್ ವರ್ಡ್ (ಒಟಿಪಿ) ಸೌಲಭ್ಯವನ್ನು ಪರಿಚಯಿಸಿದೆ.

TRENDING