Monday, January 25, 2021
Home ಸುದ್ದಿ ಜಾಲ ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿದ ಪೈಲಟ್ ನನ್ನು ವಜಾಗೊಳಿಸಿದ ಗೋ ಏರ್ ಸಂಸ್ಥೆ

ಇದೀಗ ಬಂದ ಸುದ್ದಿ

ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿದ ಪೈಲಟ್ ನನ್ನು ವಜಾಗೊಳಿಸಿದ ಗೋ ಏರ್ ಸಂಸ್ಥೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಗೋಏರ್ ಪೈಲಟ್ ನನ್ನು ಸಂಸ್ಥೆ ಶನಿವಾರ ವಜಾ ಮಾಡಿದೆ.

‘ಗೋಏರ್ ಕ್ಯಾಪ್ಟನ್ ನ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಮಾಡಿದೆ’ ಎಂದು ಏರ್ ಲೈನ್ ನ ವಕ್ತಾರರು ಶನಿವಾರ ತಿಳಿಸಿದ್ದಾರೆ.

ಗುರುವಾರ ಕ್ಯಾಪ್ಟನ್ ಮಿಕಿ ಮಲಿಕ್ ಅವರು ಪ್ರಧಾನಿ ಮೋದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದರು. ‘ಪಿಎಂ ಒಬ್ಬ ಮೂರ್ಖ. ಅದಕ್ಕೆ ಪ್ರತಿಯಾಗಿ ನೀವು ನನ್ನನ್ನು ಅದೇ ಎಂದು ಕರೆಯಬಹುದು. ಪರವಾಗಿಲ್ಲ. ನನಗೆ ಏನೂ ಇಲ್ಲ. ಏಕೆಂದರೆ ನಾನು ಪಿಎಂ ಅಲ್ಲ. ಆದರೆ ಪಿಎಂ ಒಬ್ಬ ಮೂರ್ಖ. ‘ ಎಂದು ಮಿಕಿ ಮಲಿಕ್ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಆಕ್ರೋಶ ಹೊರ ಹಾಕಿದ ಬಳಿಕ ಮಲಿಕ್ ಟ್ವೀಟ್ ಡಿಲೀಟ್ ಮಾಡಿ ಕ್ಷಮೆ ಯಾಚಿಸಿದ್ದು, ತಮ್ಮ ಟ್ವಿಟ್ಟರ್ ಖಾತೆಯನ್ನು ಲಾಕ್ ಮಾಡಿದ್ದಾರೆ.

‘ನಾನು ಪ್ರಧಾನಿ ಬಗ್ಗೆ ಮಾಡಿರುವ ಟ್ವೀಟ್ ಗಳು, ಇತರ ಅವಹೇಳನಕಾರಿ ಟ್ವೀಟ್ ಗಳು, ಸಂಬಂಧಿಸಿದವರ ಭಾವನೆಗಳಿಗೆ ನೋವುಂಟು ಮಾಡಿದ ಟ್ವೀಟ್ ಗಳಿಗೆ ನಾನು ಕ್ಷಮೆ ಯಾಚಿಸುತ್ತೇನೆ. ಗೋಏರ್ ನನ್ನ ಯಾವುದೇ ಟ್ವೀಟ್ ಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಂಬಂಧ ಹೊಂದಿಲ್ಲ ಎಂದು ನಾನು ತಿಳಿಸುತ್ತೇನೆ, ಏಕೆಂದರೆ ಅದು ವೈಯಕ್ತಿಕ ಅಭಿಪ್ರಾಯವಾಗಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಆದರೆ, ಅವರ ಮಾಲೀಕ ಗೋಏರ್ ಮೂರು ದಿನಗಳ ನಂತರ ಅವರನ್ನು ಕೆಲಸದಿಂದ ವಜಾ ಮಾಡಿ, ಅಂತಹ ವಿಷಯಗಳ ಬಗ್ಗೆ ತನ್ನ ಶೂನ್ಯ ಸಹಿಷ್ಣುತೆಯ ನೀತಿಯನ್ನು ಉಲ್ಲೇಖಿಸಿದರು.

‘ಗೋಏರ್ ಒಂದು ಶೂನ್ಯ-ಸಹಿಷ್ಣುತೆಯ ನೀತಿಯನ್ನು ಹೊಂದಿದೆ ಮತ್ತು ಎಲ್ಲಾ ಗೋಏರ್ ನೌಕರರು ಕಂಪನಿಯ ಉದ್ಯೋಗ ನಿಯಮಗಳು, ನೀತಿಗಳನ್ನು ಅನುಸರಿಸುವುದು ಕಡ್ಡಾಯ, ಸಾಮಾಜಿಕ ಮಾಧ್ಯಮ ನಡವಳಿಕೆಗಳು ಸೇರಿದಂತೆ ಎಲ್ಲವನ್ನು ಪಾಲಿಸಬೇಕು ಎಂದು ತಿಳಿಸಿದೆ.

‘ವಿಮಾನಯಾನ ಸಂಸ್ಥೆಯು ಯಾವುದೇ ವ್ಯಕ್ತಿ ಅಥವಾ ಉದ್ಯೋಗಿಯ ವೈಯಕ್ತಿಕ ಅಭಿಪ್ರಾಯಗಳೊಂದಿಗೆ ಸಂಬಂಧ ಹೊಂದಿಲ್ಲ’ ಎಂದು ಗೋಏರ್ ಪ್ರತಿನಿಧಿ ತಿಳಿಸಿದ್ದಾರೆ.

TRENDING