Friday, January 22, 2021
Home ಅಂತರ್ ರಾಷ್ಟ್ರೀಯ ಅಮೆರಿಕದ ದಾಂಧಲೆಯಲ್ಲಿ ತ್ರಿವರ್ಣ ಧ್ವಜ ಹಿಡಿದಿದ್ದ ಯುವಕನ ವಿರುದ್ಧ ಪ್ರಕರಣ ದಾಖಲು

ಇದೀಗ ಬಂದ ಸುದ್ದಿ

ಅಮೆರಿಕದ ದಾಂಧಲೆಯಲ್ಲಿ ತ್ರಿವರ್ಣ ಧ್ವಜ ಹಿಡಿದಿದ್ದ ಯುವಕನ ವಿರುದ್ಧ ಪ್ರಕರಣ ದಾಖಲು

ನವದೆಹಲಿ: ಅಮೆರಿಕಾದ ಕ್ಯಾಪಿಟಲ್ ನಲ್ಲಿ ಟ್ರಂಪ್ ಬೆಂಬಲಿಗರ ಪ್ರತಿಭಟನೆ ವೇಳೆ ಭಾರತದ ತ್ರಿವರ್ಣ ಧ್ವಜ ಹಿಡಿದಿದ್ದ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಭಾರತೀಯ ಪ್ರಜೆ ವಿನ್ಸೆಂಟ್ ಕ್ಸೇವಿಯರ್ ವಿರುದ್ಧ ದೆಹಲಿಯ ಕಲ್ಕಾಜಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ವಕೀಲ ದೀಪಕ್ ಕೆ ಸಿಂಗ್ ಅವರು ವಿನ್ಸೆಂಟ್ ಕ್ಸೇವಿಯರ್ ವಿರುದ್ಧ 1971ರ ರಾಷ್ಟ್ರೀಯ ಗೌರವ ಕಾಯ್ದೆ, ಭಾರತೀಯ ದಂಡ ಸಂಹಿತೆಯ 124ಎ ಮತ್ತು 1967ರ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ ಸೆಕ್ಷನ್ 15ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಭಾರತದ ಧ್ವಜವನ್ನು ಸೂಕ್ತವಲ್ಲದ ಸಂದರ್ಭದಲ್ಲಿ ಅವಮಾನಕರವಾಗಿ ಬಳಸುವ ಮೂಲಕ ಭಾರತ ಮತ್ತು ವಿದೇಶಿ ರಾಷ್ಟ್ರದ ನಡುವಿನ ಸಂಬಂಧವನ್ನು ಕೆಡಿಸುವಂತೆ ಮಾಡುವ ಮೂಲಕ ಭಾರತದ ಸಮಗ್ರತೆಗೆ ತಂದಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

TRENDING