ಬೆಂಗಳೂರು : ಅರ್ಚಕರು, ಮತ್ತು ಪುರೋಹಿತರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಅರ್ಚಕರು, ಪುರೋಹಿತರನ್ನು ಮದುವೆಯಾಗುವ ವಧುವಿಗೆ ಮೈತ್ರಿ ಯೋಜನೆಯಡಿ ಮೂರು ಲಕ್ಷ ರೂ. ಮೊತ್ತದ ಬಾಂಡ್ ವಿತರಿಸಲು ಮುಂದಾಗಿದೆ.
ಬ್ರಾಹ್ಮಾಣರ ಅಭಿವೃದ್ಧಿ ಮಂಡಳಿ ಮೈತ್ರಿ ಹೆಸರಿನ ಹೊಸ ಯೋಜನೆ ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಬ್ರಾಹ್ಮಣ ಅರ್ಚಕರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ 3 ಲಕ್ಷ ರೂ. ಮೌಲ್ಯದ ಬಾಂಡ್ ನೀಡಲು ಮುಂದಾಗಿದೆ.
ಮೈತ್ರಿ ಯೋಜನೆಯಡಿ ಅರ್ಚಕರನ್ನು ಮದುವೆಯಾಗುವವರಿಗೆ ಬಾಂಡ್ ನೀಡುತ್ತಿದ್ದೇವೆ. ಅನೇಕ ಅರ್ಚಕರು ಅವರ ಸಮಸ್ಯೆ ತೋಡಿಕೊಂಡಿದ್ದಾರೆ. ಈ ಕಾರಣಕ್ಕೆ ಅರ್ಚಕರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ಮೂರು ಲಕ್ಷ ರೂ. ಮೌಲ್ಯದ ಬಾಂಡ್ ನೀಡಲಾಗುತ್ತದೆ ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಹೇಳಿದ್ದಾರೆ.