Tuesday, January 26, 2021
Home ಅಂತರ್ ರಾಷ್ಟ್ರೀಯ ಇಂಡೋನೇಷ್ಯಾ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ಮೋದಿ ಸಂತಾಪ

ಇದೀಗ ಬಂದ ಸುದ್ದಿ

ಇಂಡೋನೇಷ್ಯಾ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಇಂಡೋನೇಷ್ಯಾದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಪ್ರಾಣಹಾನಿ ಕುರಿತು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

‘ಇಂಡೋನೇಷ್ಯಾದಲ್ಲಿ ದುರದೃಷ್ಟಕರ ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಮನದಾಳದ ಸಂತಾಪ ಸೂಚಿಸುತ್ತಿದ್ದೇನೆ. ದುಃಖದ ಸಮಯದಲ್ಲಿ ಭಾರತ, ಇಂಡೋನೇಷ್ಯಾ ಜೊತೆ ನಿಂತಿದೆ ಎಂದು ಹೇಳಿದ್ದಾರೆ.

ಇಂಡೋನೇಷ್ಯಾದ ಶ್ರೀವಿಜಯ ಪ್ರಯಾಣಿಕ ವಿಮಾನ ಶನಿವಾರ ಜಕಾರ್ತಾದಿಂದ ಸ್ವಲ್ಪ ದೂರದಲ್ಲಿ ಸಮುದ್ರದಲ್ಲಿ ಪತನಗೊಂಡಿತ್ತು. ಆ ಪ್ರದೇಶದಲ್ಲಿ ವಿಮಾನದ ಅವಶೇಷಗಳು ಮತ್ತು ಮನುಷ್ಯದ ದೇಹದ ಭಾಗಗಳು ಪತ್ತೆಯಾಗಿವೆ.

ಪಶ್ಚಿಮ ಕಾಲಿಮಂಟನ್ ಪ್ರಾಂತ್ಯದ ಪೊಂಟಿಯಾನಕ್‌ಗೆ ಪ್ರಯಾಣಿಸುತ್ತಿದ್ದ ವಿಮಾನ ನಾಲ್ಕು ನಿಮಿಷಗಳ ಕಾಲ ರಾಡಾರ್‌ನಿಂದ ಸಂಪರ್ಕ ಕಳೆದುಕೊಂಡಿತ್ತು. ಈ ವಿಮಾನ 62 ಜನರನ್ನು ಹೊತ್ತೊಯ್ಯುತ್ತಿತ್ತು.

TRENDING