Saturday, January 16, 2021
Home ರಾಜಕೀಯ ಮುಂದಿನ ಚುನಾವಣೆ ವೇಳೆಗೆ 'ಕಾಂಗ್ರೆಸ್' ಎಂದು ಹೇಳಿಕೊಳ್ಳುವವರೇ ಇರಲ್ಲ : ನಳೀನ್ ಕುಮಾರ್ ಕಟೀಲ್

ಇದೀಗ ಬಂದ ಸುದ್ದಿ

ಮುಂದಿನ ಚುನಾವಣೆ ವೇಳೆಗೆ ‘ಕಾಂಗ್ರೆಸ್’ ಎಂದು ಹೇಳಿಕೊಳ್ಳುವವರೇ ಇರಲ್ಲ : ನಳೀನ್ ಕುಮಾರ್ ಕಟೀಲ್

ದಾವಣಗೆರೆ : ಕಾಂಗ್ರೆಸ್ ಅರಬ್ಬಿ ಸಮುದ್ರ ಸೇರಲಿದೆ. ಮುಂದಿನ ಚುನಾವಣೆಯಲ್ಲಿ ಕೈ ಸದಸ್ಯರೇ ಇರಲ್ಲ. ಹೀಗಾಗಿ ಕಾಂಗ್ರೆಸ್ ಎಂದು ಹೇಳಿಕೊಳ್ಳುವವರು ಇರೋದಿಲ್ಲ. ಮೂಲಕ ಎಲ್ಲೇ ಬಿಜೆಪಿ ಅಭ್ಯರ್ಥಿಗಳು ನಿಂತರೂ ಗೆಲುವು ಖಚಿತ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯ ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿಚಾರಕ್ಕೆ ಬಿಟ್ಟಿದ್ದು. ಸಿಎಂ ಯಡಿಯೂರಪ್ಪ ಅವರೇ ಆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದಾಗಿ ತಿಳಿಸಿದರು.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಮುಂಬರುವ ಚುನಾವಣೆ ವೇಳೆಗೆ ಕಾಂಗ್ರೆಸ್ ಸದಸ್ಯರೇ ಇರಲ್ಲ. ಬಿಜೆಪಿ ಅಲೆಯಲ್ಲಿ ಕಾಂಗ್ರೆಸ್ ಪಕ್ಷ ದೂಳಿ ಪಟವಾಗಲಿದೆ. ಈ ಮೂಲಕ ಕಾಂಗ್ರೆಸ್ ಸದಸ್ಯರು ಎಂದು ಹೇಳಿಕೊಳ್ಳುವವರೇ ಇರಲ್ಲ. ಎಲ್ಲೇ ಬಿಜೆಪಿ ಪಕ್ಷದಿಂದ ಅಭ್ಯರ್ಥಿಗಳು ನಿಂತ್ರೂ ಗೆಲುವು ಖಚಿತ ಎಂಬುದಾಗಿ ತಿಳಿಸಿದರು.

TRENDING