ಬೆಂಗಳೂರು : ಪದವಿ, ಡಿಪ್ಲೋಮಾ ಹಾಗೂ ಇಂಜಿನಿಯರಿಂಗ್ ತರಗತಿ ಆರಂಭಗೊಂಡಿದೆ. ಆದ್ರೇ ಆಫ್ ಲೈನ್ ತರಗತಿ ಸ್ಥಗಿತಗೊಂಡಿದೆ. ಇಂತಹ ಆಫ್ ಲೈನ್ ತರಗತಿಯನ್ನು ಸಂಕ್ರಾಂತಿ ಬಳಿಕ ಪುನರಾರಂಭಿಸಲಾಗುತ್ತದೆ ಎಂಬುದಾಗಿ ಉಪ ಮುಖ್ಯಮತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್ ತರಗತಿಗಳ್ನು ಆಫ್ಲೈನ್ ವಿಧಾನದಲ್ಲಿ ಪುನರಾರಂಭಿಸುವ ಬಗ್ಗೆ ವಿಶ್ವ ವಿದ್ಯಾಲಯ ಕುಲಪತಿಗಳ ಜೊತೆ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಚರ್ಚೆ ನಡೆಸಿದ್ದಾರೆ. ಶೀಘ್ರವೇ ಆಫ್ಲೈನ್ ತರಗತಿಗಳ ದಿನಾಂಕ ಪ್ರಕಟಿಸುತ್ತೇವೆ. 2ನೇ ವರ್ಷದ ಪದವಿ, ಇಂಜಿನಿಯರಿಂಗ್ಗೆ ಆಫ್ಲೈನ್ ತರಗತಿ ನಡೆಸುವ ಬಗ್ಗೆ ವರದಿ ನೀಡಲು ಕುಲಪತಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.