Monday, January 25, 2021
Home ದೆಹಲಿ ದೆಹಲಿಗೆ ದಿಢೀರ್ ಪ್ರಯಾಣ ಬೆಳೆಸಿದ ಸಿಎಂ ಬಿಎಸ್‌ವೈ : ಸಂಪುಟ ವಿಸ್ತರಣೆ ಚರ್ಚೆ

ಇದೀಗ ಬಂದ ಸುದ್ದಿ

ದೆಹಲಿಗೆ ದಿಢೀರ್ ಪ್ರಯಾಣ ಬೆಳೆಸಿದ ಸಿಎಂ ಬಿಎಸ್‌ವೈ : ಸಂಪುಟ ವಿಸ್ತರಣೆ ಚರ್ಚೆ

ಬೆಂಗಳೂರು: ದೆಹಲಿಗೆ ಬರಲು ಬಿಜೆಪಿ ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾವೇರಿ ನಿವಾಸದಿಂದ ತೆರಳಿದ್ದಾರೆ. ಕೆಂಪೇಗೌಡ ಏರ್ಪೋರ್ಟ್ ನಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಯಡಿಯೂರಪ್ಪ ವರಿಷ್ಠರ ಭೇಟಿಗೆ ದೆಹಲಿಗೆ ಹೊರಟಿದ್ದು ಅವರಿಗೆ ಪುತ್ರ ಬಿ.ವೈ. ವಿಜಯೇಂದ್ರ ಸಾಥ್ ನೀಡಿದ್ದಾರೆ. ಸಚಿವ ಸಂಪುಟ ವಿಸ್ತರಣೆ, ಪುನಾರಚನೆ, ಮತ್ತು ಬೆಳಗಾವಿ ಲೋಕಸಭೆ, ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿದಂತೆ ವರಿಷ್ಠರೊಂದಿಗೆ ಚರ್ಚೆ ನಡೆಸಲಿದ್ದಾರೆ. ಸಂಕ್ರಾಂತಿಯೊಳಗೆ ಇಲ್ಲವೆ ನಂತರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹಿಂದೆಯೇ ವರಿಷ್ಠರನ್ನು ಸಿಎಂ ಭೇಟಿಯಾಗಿದ್ದರೂ ಒಪ್ಪಿಗೆ ನೀಡಿರಲಿಲ್ಲ. ಇಂದು ಹೈಕಮಾಂಡ್ ದೆಹಲಿಗೆ ಆಗಮಿಸುವಂತೆ ದಿಢೀರ್ ಬುಲಾವ್ ನೀಡಿದ್ದು, ಸಿಎಂ ವರಿಷ್ಠರೊಂದಿಗೆ ಚರ್ಚೆ ನಡೆಸಿದ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.

TRENDING