Sunday, January 24, 2021
Home ಅಂತರ್ ರಾಷ್ಟ್ರೀಯ 'ಜೋ ಬೈಡನ್'ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ: ಟ್ರಂಪ್

ಇದೀಗ ಬಂದ ಸುದ್ದಿ

‘ಜೋ ಬೈಡನ್’ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ: ಟ್ರಂಪ್

ವಾಷಿಂಗ್ಟನ್ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್ ಅವರ ಜನವರಿ 20ರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಈ ನಿರ್ಧಾರದ ಶಾಂತಿಯುತ ಪರಿವರ್ತನೆಯ ದ್ಯೋತಕವಾದ ಅಮೆರಿಕದ ಅಧ್ಯಕ್ಷರ ಅಧಿಕಾರ ಹಸ್ತಾಂತರ ಕಾರ್ಯಕ್ರಮಕ್ಕೆ ಗೈರಾಗುತ್ತಿರುವ ಮೊದಲ ನಿರ್ಗಮಿತ ಅಧ್ಯಕ್ಷ ಎಂಬ ಅಪಖ್ಯಾತಿಗೆ ಡೊನಾಲ್ಡ್ ಟ್ರಂಪ್ ಪಾತ್ರರಾಗುತ್ತಿದ್ದಾರೆ. ಆದರೆ, ತಮ್ಮ ಅಧಿಕಾರಾವಧಿಯ ಕಡೆಯ ದಿನಗಳನ್ನು ಹೇಗೆ ಕಳೆಯುತ್ತಾರೆ ಎಂಬ ಬಗ್ಗೆ ಡೊನಾಲ್ಡ್ ಟ್ರಂಪ್ ತುಟಿ ಬಿಚ್ಚಿಲ್ಲ.

ಸಂಸತ್ ಭವನದಲ್ಲಿ ತಮ್ಮ ಬೆಂಬಲಿಗರು ದಾಂಧಲೆ ನಡೆಸಿದ ಕಹಿ ಘಟನೆ ನಡೆದು ಎರಡು ದಿನಗಳ ಬಳಿಕ ಡೊನಾಲ್ಡ್ ಟ್ರಂಪ್ ಈ ನಿರ್ಧಾರಕ್ಕೆ ಬಂದಿದ್ದಾರೆ. “ಜನವರಿ 20 ಉದ್ಘಾಟನಾ ಕಾರ್ಯಕ್ರಮಕ್ಕೆ ನಾನು ಹೋಗುತ್ತಿಲ್ಲ, ಯಾರೆಲ್ಲ ಈ ಬಗ್ಗೆ ಕೇಳಿದ್ದರೋ ಅವರಿಗೆ ಇದೋ ನನ್ನ ಉತ್ತರ,” ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಡೊನಾಲ್ಡ್ ಟ್ರಂಪ್ ಟ್ವೀಟ್ ಮೂಲಕ ಘೋಷಿಸಿರುವ ನಿರ್ಧಾರ ಬಹು ನಿರೀಕ್ಷಿತವಾಗಿತ್ತು. ಕಳೆದ ಒಂದು ತಿಂಗಳಿಂದ ಸೋಲನ್ನು ಒಪ್ಪಿಕೊಳ್ಳದೆ, ನಾನೇ ಗೆದ್ದಿರುವೆ ಎಂಬಂತೆ ಬಡಾಯಿ ಕೊಚ್ಚಿಕೊಳ್ಳುತ್ತಾ ಓಡಾಡಿದ್ದರು. ಚುನಾವಣೆ ಪ್ರಕ್ರಿಯೆ ಸರಿಯಾಗಿಯೇ ನಡೆದಿದೆ ಎಂದು ತಮ್ಮ ಅಧೀನ ಆಡಳಿತಾಧಿಕಾರಿಗಳೇ ಹೇಳುತ್ತಿದ್ದರು ಸಹ ಡೊನಾಲ್ಡ್ ಟ್ರಂಪ್ ಪಟ್ಟು ಬಿಟ್ಟಿರಲಿಲ್ಲ. ಬೈಡನ್ ವಿಜಯ ಅಧಿಕೃತ ಘೋಷಣೆ ಬಳಿಕ ಸೋಲೊಪ್ಪಿಕೊಂಡಿದ್ದಾರೆ.

 

TRENDING