Saturday, January 23, 2021
Home ಜಿಲ್ಲೆ ರಾಯಚೂರು ರಾಯಚೂರು: ಈಜಲು ತೆರಳಿದ್ದ ಬಾಲಕರಿಬ್ಬರು ನೀರು ಪಾಲು

ಇದೀಗ ಬಂದ ಸುದ್ದಿ

ರಾಯಚೂರು: ಈಜಲು ತೆರಳಿದ್ದ ಬಾಲಕರಿಬ್ಬರು ನೀರು ಪಾಲು

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಪೂಜಾರಿ ಸೀತಮ್ಮನ ತಾಂಡಾ ಬಳಿ ಕಲ್ಲಿನ ಕ್ವಾರಿಯಲ್ಲಿ ಈಜಲು ತೆರಳಿದ್ದ ಬಾಲಕರಿಬ್ಬರು ನೀರುಪಾಲಾಗಿರುವ ಘಟನೆ ನಿನ್ನೆ ನಡೆದಿದೆ. ಮೃತ ಬಾಲಕರನ್ನ ಸಂತೋಷ್ ರಾಠೋಡ್(15) ಹಾಗೂ ಮಂಜುನಾಥ್ ರಾಠೋಡ್(13)​​​ ಎಂದು ಗುರುತಿಸಲಾಗಿದೆ.

ಇತ್ತಿಚಿಗೆ ಮಳೆ ಬಂದ ಕಾರಣ ಕಲ್ಲಿನ ಕ್ವಾರಿಗಳಲ್ಲಿ ಇತ್ತೀಚೆಗೆ ನೀರು ಸಂಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ಬಾಲಕರು ಈಜಲು ತೆರಳಿದ್ದಾಗ ಅವಘಡ ಸಂಭವಿಸಿದೆ ಎಂದು ಹೇಳಲಾಗ್ತಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕರ ಮೃತದೇಹವನ್ನ ಹೊರತೆಗೆದಿದ್ದಾರೆ. ಅದ್ರಂತೆ, ದೇವದುರ್ಗ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ.

TRENDING