Saturday, January 16, 2021
Home ಅಂತರ್ ರಾಷ್ಟ್ರೀಯ ಜಕಾರ್ತದಿಂದ ಟೇಕಾಫ್ ಆದ ಕೆಲವೇ ಕ್ಷಣದಲ್ಲಿ ಶ್ರೀವಿಜಯ ಏರ್ ವಿಮಾನ ನಾಪತ್ತೆ

ಇದೀಗ ಬಂದ ಸುದ್ದಿ

ಜಕಾರ್ತದಿಂದ ಟೇಕಾಫ್ ಆದ ಕೆಲವೇ ಕ್ಷಣದಲ್ಲಿ ಶ್ರೀವಿಜಯ ಏರ್ ವಿಮಾನ ನಾಪತ್ತೆ

 ಜಕಾರ್ತ: ಟೇಕಾಫ್ ಆದ ಕೆಲವೇ ಕ್ಷಣದಲ್ಲಿ ಶ್ರೀವಿಜಯ ಏರ್ ಸಂಸ್ಥೆಗೆ ಸೇರಿದ ವಿಮಾನ ನಾಪತ್ತೆಯಾಗಿದೆ. ಸಂಪರ್ಕ ಕಳೆದುಕೊಂಡ ವಿಮಾನಕ್ಕಾಗಿ ಹುಡುಕಾಟ ನಡೆಸಲಾಗಿದೆ.

ಇಂಡೋನೇಷ್ಯಾದ ಜಕಾರ್ತದಿಂದ ಪಶ್ಚಿಮ ಕಾಲಿಮಂಥನ್ ಪ್ರಾಂತ್ಯದ ಪೊಂಟಿಯಾನಕ್ ಪ್ರಾಂತ್ಯಕ್ಕೆ ಹೊರಟಿದ್ದ ವಿಮಾನ ನಾಪತ್ತೆಯಾಗಿದೆ. ನಾಪತ್ತೆಯಾದ ವಿಮಾನಕ್ಕಾಗಿ ಹುಡುಕಾಟ ನಡೆಸಲಾಗಿದೆ ಎಂದು ಶ್ರೀವಿಜಯ ಏರ್ ವಿಮಾನ ಸಂಸ್ಥೆಯ ವತಿಯಿಂದ ಮಾಹಿತಿ ನೀಡಲಾಗಿದ್ದು. ವಿಮಾನದಲ್ಲಿ 59 ಪ್ರಯಾಣಿಕರಿದ್ದರು. ವಿಮಾನ ಏನಾಗಿದೆ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಹೇಳಲಾಗಿದೆ.

TRENDING