Tuesday, January 26, 2021
Home ಅಂತರ್ ರಾಷ್ಟ್ರೀಯ ಯುಕೆನಿಂದ ನೆಗೆಟಿವ್ ರಿಪೋರ್ಟ್ ತಂದ್ರೂ ಇಲ್ಲಿ ಕೊರೋನಾ ಪರೀಕ್ಷೆ ಕಡ್ಡಾಯ : ಕೆ. ಸುಧಾಕರ್

ಇದೀಗ ಬಂದ ಸುದ್ದಿ

ಯುಕೆನಿಂದ ನೆಗೆಟಿವ್ ರಿಪೋರ್ಟ್ ತಂದ್ರೂ ಇಲ್ಲಿ ಕೊರೋನಾ ಪರೀಕ್ಷೆ ಕಡ್ಡಾಯ : ಕೆ. ಸುಧಾಕರ್

 ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭೇಟಿ ನೀಡಿ ಯುಕೆ ಪ್ರಯಾಣಿಕರ ಪರೀಕ್ಷೆ ವ್ಯವಸ್ಥೆ ಪರಿಶೀಲನೆ ನಡೆಸಿದ್ದಾರೆ.

ನಾಳೆ ಬೆಳಗ್ಗೆ 4 ಗಂಟೆಗೆ ಯುಕೆಯಿಂದ ಮೊದಲ ವಿಮಾನ ಬರಲಿದೆ. ಬಹಳ ದಿನಗಳ ನಂತರ ವಿಮಾನ ಸಂಚಾರ ಆರಂಭವಾಗಿರುವುದರಿಂದ ಪ್ರತಿ ವಿಮಾನದಲ್ಲಿ 300-350 ಪ್ರಯಾಣಿಕರು ಭರ್ತಿಯಾಗಿ ಬರಲಿದ್ದಾರೆ ಎಂದು ಏರ್ಪೋರ್ಟ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯುಕೆನಿಂದ ಬರುವ ಪ್ರಯಾಣಿಕರು ನೆಗೆಟಿವ್ ರಿಪೋರ್ಟ್ ತಂದಿದ್ದರೂ ಇಲ್ಲಿ ಪರೀಕ್ಷೆ ಕಡ್ಡಾಯವೆಂದು ಮಾರ್ಗಸೂಚಿ ಹೊರಡಿಸಲಾಗಿದೆ. ಅವರಿಗೆ ವಿಮಾನ ನಿಲ್ದಾಣದಲ್ಲೇ ಪರೀಕ್ಷೆ ಮಾಡಲಾಗುವುದು. ನೆಗೆಟಿವ್ ವರದಿ ಬಂದ ನಂತರವೇ ಅವರನ್ನು ಬಿಡಲಾಗುವುದು.

ಬೇರೆ ದೇಶಗಳಿಂದ ಬಂದವರಿಗೆ 72 ಗಂಟೆಗಳ ಅಂತರದಲ್ಲಿ ನೆಗೆಟಿವ್ ರಿಪೋರ್ಟ್ ಇರಬೇಕು. ಇಲ್ಲದಿದ್ದರೆ ಅವರನ್ನು ಪರೀಕ್ಷೆಗೊಳಪಡಿಸಲಾಗುವುದು. ಆರೋಗ್ಯ ಇಲಾಖೆ ಸಹಯೋಗದಲ್ಲಿ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ವ್ಯವಸ್ಥೆ ಮಾಡಲಾಗಿದೆ. ಏರ್ ಪೋರ್ಟ್ ಸಿಬ್ಬಂದಿ ಸಹ ಸಹಕಾರ ನೀಡಿದ್ದಾರೆ. ಪಾಸಿಟಿವ್ ವರದಿ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್ ಅಥವಾ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುವುದು ಎಂದು ಹೇಳಲಾಗಿದೆ.

TRENDING