Saturday, January 16, 2021
Home ಅಂತರ್ ರಾಜ್ಯ ರಾಜಸ್ಥಾನ : ಮಾಜಿ ಸಿಎಂ ವಸುಂಧರಾ ರಾಜೆ ಬೆಂಬಲಿಗರಿಂದ ಹೊಸ ಪಕ್ಷ ಸ್ಥಾಪನೆ

ಇದೀಗ ಬಂದ ಸುದ್ದಿ

ರಾಜಸ್ಥಾನ : ಮಾಜಿ ಸಿಎಂ ವಸುಂಧರಾ ರಾಜೆ ಬೆಂಬಲಿಗರಿಂದ ಹೊಸ ಪಕ್ಷ ಸ್ಥಾಪನೆ

 ಜೈಪುರ: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಕೆಲವು ಬೆಂಬಲಿಗರು ಹೊಸ ರಾಜಕೀಯ ಪಕ್ಷ ಸ್ಥಾಪಿಸಿದ್ದು, 2023ರಲ್ಲಿ ರಾಜೆ ಅವರನ್ನು ಮತ್ತೆ ಸಿಎಂ ಆಗಿ ನೋಡಬೇಕೆಂದು ಹೇಳಿದ್ದಾರೆ.

ಈ ಬೆಳವಣಿಗೆ ರಾಜೆ ಬೆಂಬಲಿಗರು ರಾಜ್ಯದಲ್ಲಿ ಮತ್ತೆ ಮಾಜಿ ಸಿಎಂಗೆ ನಾಯಕತ್ವ ನೀಡುವಂತೆ ಒತ್ತಾಯಿಸುವ ಮತ್ತು ಪಕ್ಷದ ರಾಜ್ಯ ಘಟಕದಲ್ಲಿನ ಘರ್ಷಣೆಯ ಬಗ್ಗೆ ಸುಳಿವು ನೀಡುವಂತೆ ಮಾಡಿದೆ.

ನಾವು ಡಿಸೆಂಬರ್ 20 ರಂದು ‘ವಸುಂಧರಾ ರಾಜೆ ಸಮರ್ಥಕ್ ರಾಜಸ್ಥಾನ್(ಮಂಚ್)’ ಎಂಬ ಪಕ್ಷ ಘೋಷಿಸಿದ್ದೇವೆ ಮತ್ತು ರಾಜ್ಯದಲ್ಲಿ ರಾಜೆ ನೇತೃತ್ವದ ಹಿಂದಿನ ಸರ್ಕಾರಗಳ ಸಾಧನೆಗಳು ಮತ್ತು ನೀತಿಗಳನ್ನು ಪ್ರಚಾರ ಮಾಡುವ ಉದ್ದೇಶದಿಂದ 25 ಜಿಲ್ಲೆಗಳಲ್ಲಿ ಪದಾಧಿಕಾರಿಗಳನ್ನು ನೇಮಿಸಿದ್ದೇವೆ” ಎಂದು ನೂತನ ಪಕ್ಷದ ರಾಜ್ಯ ಅಧ್ಯಕ್ಷ ವಿಜಯ್ ಭರದ್ವಾಜ್ ಅವರು ಪಿಟಿಐಗೆ ತಿಳಿಸಿದ್ದಾರೆ.

ಸತೀಶ್ ಪೂನಿಯಾ ಪಕ್ಷದ ಸಂಘಟನೆಯ ಮುಖ್ಯಸ್ಥರಾಗಿದ್ದು, ಪಕ್ಷವನ್ನು ಬಲಪಡಿಸುವುದು ನಮ್ಮ ಉದ್ದೇಶ. ಇದು ಪರ್ಯಾಯ ಸಂಘಟನೆಯಲ್ಲ. ಆದರೆ ರಾಜೆಗೆ ನಮ್ಮ ನಿಷ್ಠೆಯನ್ನು ವ್ಯಕ್ತಪಡಿಸುವ ಮಾರ್ಗವಾಗಿದೆ. ಅವರ ಸಾಧನೆಗಳನ್ನು ನಾವು ಜನರಲ್ಲಿ ಮಾತ್ರ ಪ್ರಚಾರ ಮಾಡುತ್ತೇವೆ’ ಎಂದು ಬಿಜೆಪಿಯ ಸಕ್ರಿಯ ಸದಸ್ಯರೆಂದು ಹೇಳಿಕೊಳ್ಳುವ ಭರದ್ವಾಜ್ ಹೇಳಿದ್ದಾರೆ.

TRENDING