Saturday, January 23, 2021
Home ಕೋವಿಡ್-19 ರಾಜ್ಯದಲ್ಲಿಂದು ಹೊಸದಾಗಿ 899 ಮಂದಿಗೆ ಕೊರೋನಾ, 4 ಸೋಂಕಿತರು ಬಲಿ

ಇದೀಗ ಬಂದ ಸುದ್ದಿ

ರಾಜ್ಯದಲ್ಲಿಂದು ಹೊಸದಾಗಿ 899 ಮಂದಿಗೆ ಕೊರೋನಾ, 4 ಸೋಂಕಿತರು ಬಲಿ

 ಬೆಂಗಳೂರು : ರಾಜ್ಯದಲ್ಲಿ ಇಂದು ಹೊಸದಾಗಿ 899 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಮೂಲಕ ಸೋಂಕಿತರ ಸಂಖ್ಯೆ 9,26,767ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಹೊಸದಾಗಿ ಬೆಂಗಳೂರು ನಗರದಲ್ಲಿ 465 ಜನರು ಸೇರಿದಂತೆ 899 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇಂದರಿಂದಾಗಿ ಸೋಂಕಿತರ ಸಂಖ್ಯೆ 9,26,767ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 872 ಜನರು ಸೇರಿದಂತೆ ಇದುವರೆಗೆ 9,05,158 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ಬೆಂಗಳೂರು ನಗರದಲ್ಲಿ 5,876 ಸಕ್ರೀಯ ಸೋಂಕಿತರು ಸೇರಿದಂತೆ ರಾಜ್ಯದಲ್ಲಿ 9,452 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.

ಇನ್ನೂ ಇಂದು ಬೆಂಗಳೂರು ನಗರದಲ್ಲಿ ಮೂವರು ಹಾಗೂ ಮೈಸೂರಿನಲ್ಲಿ ಒಬ್ಬರು ಸೇರಿದಂತೆ ನಾಲ್ವರು ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 12,138ಕ್ಕೆ ಏರಿಕೆಯಾಗಿದೆ.

TRENDING