Tuesday, January 19, 2021
Home ಜಿಲ್ಲೆ ಉಡುಪಿ ಉಡುಪಿಯಲ್ಲಿ 20 ಮಂದಿಗೆ ಹೊಸದಾಗಿ ಕೋವಿಡ್ ಪಾಸಿಟಿವ್

ಇದೀಗ ಬಂದ ಸುದ್ದಿ

ಉಡುಪಿಯಲ್ಲಿ 20 ಮಂದಿಗೆ ಹೊಸದಾಗಿ ಕೋವಿಡ್ ಪಾಸಿಟಿವ್

 ಉಡುಪಿ, ಜ.9: ಜಿಲ್ಲೆಯಲ್ಲಿ ಶನಿವಾರ 20 ಮಂದಿಗೆ ಹೊಸದಾಗಿ ಕೋವಿಡ್ ಪಾಸಿಟಿವ್‌ ಕಾಣಿಸಿಕೊಂಡಿದೆ. ದಿನದಲ್ಲಿ 12 ಮಂದಿ ಸೋಂಕಿನಿಂದ ಗುಣಮುಖ ರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, ಸದ್ಯ 102 ಮಂದಿ ಸೋಂಕಿಗಾಗಿ ಚಿಕಿತ್ಸೆಯಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಪಾಸಿಟಿವ್ ಬಂದವರಲ್ಲಿ 12 ಮಂದಿ ಪುರುಷ ಮತ್ತು 8 ಮಂದಿ ಮಹಿಳೆಯರಿದ್ದಾರೆ. ಇವರಲ್ಲಿ 12 ಮಂದಿ ಉಡುಪಿ ತಾಲೂಕಿನವರು. ನಾಲ್ವರು ಕುಂದಾಪುರ, ಮೂವರು ಕಾರ್ಕಳ ತಾಲೂಕಿನವರಾದರೆ ಒಬ್ಬರು ಹೊರಜಿಲ್ಲೆ ಯವರು. ಪಾಸಿಟಿವ್ ಬಂದ 12 ಪುರುಷರು ಹಾಗೂ 7 ಮಂದಿ ಮಹಿಳೆ ಯರಲ್ಲಿ ರೋಗದ ಯಾವುದೇ ಲಕ್ಷಣ ಕಂಡುಬಂದಿಲ್ಲ. ಇವರಲ್ಲಿ 19 ಮಂದಿ ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಾ.ಸೂಡ ತಿಳಿಸಿದರು.

12 ಮಂದಿ ಗುಣಮುಖ

ಇಂದು ಸಹ ಕೋವಿಡ್‌ನಿಂದ ಯಾರೂ ಮೃತಪಟ್ಟಿಲ್ಲ. ಜಿಲ್ಲೆಯಲ್ಲಿ ಇಂದಿನವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 189 ಮಾತ್ರ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

TRENDING