Wednesday, January 27, 2021
Home ಕೋವಿಡ್-19 ಮೈಸೂರಿನಲ್ಲಿಂದು 42 ಮಂದಿಗೆ ಕೊರೋನಾ ಪಾಸಿಟಿವ್

ಇದೀಗ ಬಂದ ಸುದ್ದಿ

ಮೈಸೂರಿನಲ್ಲಿಂದು 42 ಮಂದಿಗೆ ಕೊರೋನಾ ಪಾಸಿಟಿವ್

ಮೈಸೂರು : ಜಿಲ್ಲೆಯಲ್ಲಿ ಇಂದು ಹೊಸದಾಗಿ 42 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 52,772ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ಜಿಲ್ಲಾಡಳಿತ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಹೊಸದಾಗಿ 42 ಜನರಿಗೆ ಕೊರೋನಾ ಸೋಂಕು ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 52,772 ಕ್ಕೆ ಏರಿಕೆಯಾಗಿದೆ. ಅಲ್ಲದೇ ಇಂದು 43 ಸೋಂಕಿತರು ಸೇರಿದಂತೆ ಇದುವರೆಗೆ, 51,443 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ 311 ಜನ ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.

ಇನ್ನೂ ಇಂದು ಕೂಡ ಕಿಲ್ಲರ್ ಕೊರೋನಾಗೆ ಸೋಂಕಿತರೋರ್ವರು ಮೃತಪಟ್ಟಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಇಂದುವರೆಗೆ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 1,018ಕ್ಕೆ ಏರಿಕೆಯಾಗಿದೆ.

TRENDING