Wednesday, January 27, 2021
Home ಕೋವಿಡ್-19 'ಕೋವಾಕ್ಸಿನ್' ಲಸಿಕೆ ಪ್ರಯೋಗಕ್ಕೆ ಒಳಪಟ್ಟಿದ್ದ ಸ್ವಯಂಸೇವಕ ಸಾವು!

ಇದೀಗ ಬಂದ ಸುದ್ದಿ

‘ಕೋವಾಕ್ಸಿನ್’ ಲಸಿಕೆ ಪ್ರಯೋಗಕ್ಕೆ ಒಳಪಟ್ಟಿದ್ದ ಸ್ವಯಂಸೇವಕ ಸಾವು!

 ಭಾರತದಲ್ಲಿ ಜನವರಿ 16ರಿಂದ ಕೊರೋನಾ ಲಸಿಕೆಯ ಅಭಿಯಾನವೇನೋ ಶುರುವಾಗ್ತಿದೆ. ಆದ್ರೆ ಲಸಿಕೆಯ ಸುರಕ್ಷತೆ ಬಗ್ಗೆ ಅನುಮಾನ ಮೂಡುವಂತಹ ಘಟನೆಯೊಂದು ನಡೆದಿದೆ. ಏನಾಗಿದೆ ಅಂದ್ರೆ ‘ಕೋವಾಕ್ಸಿನ್​’ ಲಸಿಕೆಯ 3ನೇ ಹಂತದ ಮಾನವ ಪ್ರಯೋಗಕ್ಕೆ ಒಳಗಾಗಿದ್ದ 45 ವರ್ಷದ ಸ್ವಯಂಸೇವಕನೊಬ್ಬ ಮೃತಪಟ್ಟಿದ್ದಾನೆ. ಈ ಘಟನೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ. ಈತನಿಗೆ ಡಿಸೆಂಬರ್ 12ರಂದು ಭಾರತ್​ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಲಸಿಕೆ ಹಾಕಲಾಗಿತ್ತು. ಅದಾಗಿ 9 ದಿನಗಳಲ್ಲಿ ಆತ ಮೃತಪಟ್ಟಿದ್ದಾನೆ.

ಈ ಬಗ್ಗೆ ಭಾರತ್ ಬಯೋಟೆಕ್​ ಕಂಪನಿ ಸ್ಪಷ್ಟನೆ ಕೊಟ್ಟಿದೆ. ಸ್ವಯಂಸೇವಕನು ದಾಖಲಾತಿ ಸಮಯದಲ್ಲಿ ಮೂರನೇ ಹಂತದ ಪ್ರಯೋಗಕ್ಕೆ ಇರಬೇಕಿದ್ದ ಎಲ್ಲಾ ಮಾನದಂಡಗಳನ್ನ ಪೂರೈಸಿದ್ದ. ಲಸಿಕೆ ಹಾಕಿದ 7 ದಿನಗಳವರೆಗೆ ಆರೋಗ್ಯವಾಗಿದ್ದ. ಯಾವುದೇ ಅಡ್ಡಪರಿಣಾಮ ಕಾಣಿಸಿಕೊಂಡಿರಲಿಲ್ಲ. ಲಸಿಕೆ ಪಡೆದ 9 ದಿನಗಳ ನಂತರ ಆತ ಮೃತಪಟ್ಟಿದ್ದಾನೆ. ನಾವು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಸಾವಿಗೆ ಕೊರೋನಾ ಲಸಿಕೆ ಕಾರಣವಲ್ಲ ಅನ್ನೋದು ಗೊತ್ತಾಗಿದೆ. ಅಲ್ಲದೆ ಈ ಸ್ವಯಂಸೇವಕನಿಗೆ ಕೊಟ್ಟಿದ್ದು ಅಸಲಿ ಕೊರೋನಾ ಲಸಿಕೆಯೋ ಅಥವಾ ಪ್ಲೆಸಿಬೋ (ಡೂಪ್ಲಿಕೇಟ್​) ಲಸಿಕೆಯೋ ಅನ್ನೋದು ಗೊತ್ತಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕಾರ್ಡಿಯೊರೆಸ್ಪಿರೇಟರಿ ವೈಫಲ್ಯವೇ ಸಾವಿಗೆ ಕಾರಣ ಅಂತ ಹೇಳಲಾಗಿದೆ. ಸದ್ಯ ಈ ಪ್ರಕರಣವನ್ನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಅಂತ ಭಾರತ್ ಬಯೋಟೆಕ್ ಕಂಪನಿ ಹೇಳಿದೆ.

TRENDING