Sunday, January 17, 2021
Home ಅಂತರ್ ರಾಜ್ಯ ಅಯೋಧ್ಯೆ ನಗರ ಅಭಿವೃದ್ಧಿಗೆ ಐಐಎಂ-ಇಂದೋರ್‌ ಜತೆ ಒಪ್ಪಂದ

ಇದೀಗ ಬಂದ ಸುದ್ದಿ

ಅಯೋಧ್ಯೆ ನಗರ ಅಭಿವೃದ್ಧಿಗೆ ಐಐಎಂ-ಇಂದೋರ್‌ ಜತೆ ಒಪ್ಪಂದ

ಇಂದೋರ್‌: ಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವ ಕಾರಣದಿಂದಾಗಿ, ಆ ನಗರವನ್ನು ಅಂತರರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಅಯೋಧ್ಯೆ ನಗರ ಪಾಲಿಕೆ ಹಾಗೂ ಐಐಎಂ- ಇಂದೋರ್‌ ಒಪ್ಪಂದ ಮಾಡಿಕೊಂಡಿವೆ.

ಕೇಂದ್ರದ ಸ್ವಚ್ಛನಗರ ಪ್ರಶಸ್ತಿಗೆ ಪಾತ್ರವಾಗಿರುವ ಇಂದೋರ್‌ ನಗರದಲ್ಲಿ ಅಳವಡಿಸಿರುವ ಕ್ರಮಗಳನ್ನು ಅನುಸರಿಸಿ, ಅಯೋಧ್ಯೆಯನ್ನು ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಐಐಎಂ- ಇಂದೋರ್‌ ನಿರ್ದೇಶಕ ಹಿಮಾಂಶು ರೈ ಹಾಗೂ ಪಾಲಿಕೆ ಆಯುಕ್ತ ವಿಶಾಲ್‌ ಸಿಂಗ್‌ ಸಹಿ ಹಾಕಿದರು.

‘ಅಯೋಧ್ಯೆಯನ್ನು ವಿಶ್ವದರ್ಜೆಯ ನಗರವಾಗಿ ಅಭಿವೃದ್ಧಿಗೊಳಿಸು ಉದ್ದೇಶ ನಮ್ಮದಾಗಿದೆ. ಧಾರ್ಮಿಕ ಪ್ರವಾಸೋಧ್ಯಮವನ್ನು ಪ್ರೋತ್ಸಾಹಿಸಲು ಪಾಲಿಕೆ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಐಐಎಂ ಜೊತೆಗಿನ ಈ ಒಪ್ಪಂದವು ಇದಕ್ಕೆ ಸಹಕಾರಿಯಾಗಲಿದೆ. ಜ.14ರಿಂದ ಈ ಒಪ್ಪಂದವು ಅನುಷ್ಠಾನಕ್ಕೆ ಬರಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

TRENDING