Monday, January 25, 2021
Home ರಾಜ್ಯ ಸಂಕ್ರಾಂತಿ ನಂತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್ ಆಫ್ ಲೈನ್ ತರಗತಿ ಪುನರಾರಂಭ : ಡಿಸಿಎಂ ಅಶ್ವತ್ಥ...

ಇದೀಗ ಬಂದ ಸುದ್ದಿ

ಸಂಕ್ರಾಂತಿ ನಂತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್ ಆಫ್ ಲೈನ್ ತರಗತಿ ಪುನರಾರಂಭ : ಡಿಸಿಎಂ ಅಶ್ವತ್ಥ ನಾರಾಯಣ

ಬೆಂಗಳೂರು : ಪದವಿ, ಡಿಪ್ಲೋಮಾ ಹಾಗೂ ಇಂಜಿನಿಯರಿಂಗ್ ತರಗತಿ ಆರಂಭಗೊಂಡಿದೆ. ಆದ್ರೇ ಆಫ್ ಲೈನ್ ತರಗತಿ ಸ್ಥಗಿತಗೊಂಡಿದೆ. ಇಂತಹ ಆಫ್ ಲೈನ್ ತರಗತಿಯನ್ನು ಸಂಕ್ರಾಂತಿ ಬಳಿಕ ಪುನರಾರಂಭಿಸಲಾಗುತ್ತದೆ ಎಂಬುದಾಗಿ ಉಪ ಮುಖ್ಯಮತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್ ತರಗತಿಗಳ್ನು ಆಫ್​ಲೈನ್ ವಿಧಾನದಲ್ಲಿ ಪುನರಾರಂಭಿಸುವ ಬಗ್ಗೆ ವಿಶ್ವ ವಿದ್ಯಾಲಯ ಕುಲಪತಿಗಳ ಜೊತೆ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಚರ್ಚೆ ನಡೆಸಿದ್ದಾರೆ. ಶೀಘ್ರವೇ ಆಫ್​ಲೈನ್ ತರಗತಿಗಳ ದಿನಾಂಕ ಪ್ರಕಟಿಸುತ್ತೇವೆ. 2ನೇ ವರ್ಷದ ಪದವಿ, ಇಂಜಿನಿಯರಿಂಗ್​ಗೆ ಆಫ್​ಲೈನ್ ತರಗತಿ ನಡೆಸುವ ಬಗ್ಗೆ ವರದಿ ನೀಡಲು ಕುಲಪತಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

TRENDING