Wednesday, January 20, 2021
Home ಬೆಂಗಳೂರು ಎಚ್.ವಿಶ್ವನಾಥ್ ಮಂತ್ರಿಯಾಗುವ ತಿರುಕನ ಕನಸು ಕಾಣುತ್ತಿದ್ದಾರೆ : ಸಾ.ರಾ ಮಹೇಶ್

ಇದೀಗ ಬಂದ ಸುದ್ದಿ

ಎಚ್.ವಿಶ್ವನಾಥ್ ಮಂತ್ರಿಯಾಗುವ ತಿರುಕನ ಕನಸು ಕಾಣುತ್ತಿದ್ದಾರೆ : ಸಾ.ರಾ ಮಹೇಶ್

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಿರುದ್ಧ ಮಾಜಿ ಸಚಿವ, ಜೆಡಿಎಸ್ ನಾಯಕ ಸಾ.ರಾ.ಮಹೇಶ್ ಮತ್ತೊಮ್ಮೆ ಹರಿಹಾಯ್ದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬೊಂಬಾಯಿ ಮಿಠಾಯಿ ರುಚಿ ಸವೆದಿದ್ದು ಮಂತ್ರಿಯಾಗುವ ತಿರುಕನ ಕನಸು ಕಾಣುತ್ತಿದ್ದಾರೆ.
‘ಬೊಂಬಾಯಿ ಮಿಠಾಯಿ ವಿಶ್ವನಾಥ್’ ಅವರ ನಾಲಿಗೆಗೆ ಇನ್ನೊಬ್ಬರನ್ನು ವ್ಯಕ್ತಿಗತವಾಗಿ ಜರಿಯುವ ಹಕ್ಕಾದರೂ ಇದೆಯಾ? ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ.ಬೌದ್ಧಿಕ ದಿವಾಳಿತನಕ್ಕೆ ತುತ್ತಾದವರು ಮಾತ್ರ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವ್ಯಕ್ತಿಗತ ಲೇವಡಿಗಿಳಿಯುತ್ತಾರೆ. ಅವರು ಎಂದೋ ಬಫೂನ್‌ ಆಗಿರುವುದನ್ನು ಮರೆತಿರುತ್ತಾರೆ ಎಂದು ಟೀಕಿಸಿದ್ದಾರೆ.

ಬೊಂಬಾಯಿ ಮಿಠಾಯಿ ರುಚಿ ಸವೆದಿದ್ದು ಮಂತ್ರಿಯಾಗುವ ತಿರುಕನ ಕನಸು ಕಾಣುತ್ತಿದ್ದಾರೆ. ತಾನು ಘನವಾಗದೆ ಘನವೇನು ಬಂತು. ಹರುಕುಬಾಯಿ, ಕೊಳೆತ ಮೆದುಳು ಮಂತ್ರಿಗಿರಿಯ ಘನತೆಗೆ ಊಳಿಡುತಿದೆ.ಎಂದೋ ಭಿಕ್ಷುಕನಾಗಿರುವ ವಿಶ್ವನಾಥ್ ಎರಡು ಬಾರಿ ಮುಖ್ಯಮಂತ್ರಿಯಾದವರ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳದಿದ್ದರೆ ತಕ್ಕಶಾಸ್ತಿ ಮಾಡಬೇಕಾಗುತ್ತದೆ ಎಚ್ಚರ ಎಂದು ಹರಿಹಾಯ್ದಿದಿದ್ದಾರೆ.

TRENDING