Sunday, January 24, 2021
Home ಅಂತರ್ ರಾಷ್ಟ್ರೀಯ ಚೀನಾದ ಪ್ರಮುಖ ಬ್ಯಾಂಕ್‍ನ ಮಾಜಿ ಅಧ್ಯಕ್ಷನಿಗೆ ಜೀವಾವಧಿ ಶಿಕ್ಷೆ..!

ಇದೀಗ ಬಂದ ಸುದ್ದಿ

ಚೀನಾದ ಪ್ರಮುಖ ಬ್ಯಾಂಕ್‍ನ ಮಾಜಿ ಅಧ್ಯಕ್ಷನಿಗೆ ಜೀವಾವಧಿ ಶಿಕ್ಷೆ..!

ಬೀಜಿಂಗ್, ಜ.8- ದೇಶದ ಪ್ರಮುಖ ಚೈನೀಸ್ ಸ್ಟೇಟ್ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಹು ಹ್ಯುಬಾಂಗ್ ಏಷ್ಯಾ ದೇಶಗಳಲ್ಲಿ ಬೀಜಿಂಗ್ ಉಪಕ್ರಮದಡಿ ನಿರ್ಮಾಣ ಮಾಡಲಿರುವ ಡಜನ್‍ಗಟ್ಟಲೆ ರೈಲ್ವೆ ಮತ್ತು ಬಂದರುಗಳ ಹಣಕಾಸು ಮಂಜೂರು ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಆರೋಪಿ ಹ್ಯುಬಾಂಗ್ 2009 ರಿಂದ 2019ರ ನಡುವೆ ತಮ್ಮ ಹುದ್ದೆಯನ್ನು ಸಾಲ ಮಂಜೂರು ಮಾಡಿಸಿಕೊಡುವಲ್ಲಿ ಹಾಗೂ ಇತರರಿಗೆ ಉದ್ಯೋಗ ದೊರಕಿಸಿಕೊಡುವಲ್ಲಿ ಬಳಸಿಕೊಂಡು ಅವ್ಯವಹಾರ ನಡೆಸಿದ್ದಲ್ಲದೆ, 85.5 ಮಿಲಿಯನ್ ಯೆನ್ (13.2 ಮಿಲಿಯನ್ ಡಾಲರ್ಸ್) ಲಂಚವನ್ನು ಪಡೆದಿದ್ದಾರೆ ಎಂದು ಉತ್ತರ ಬೀಜಿಂಗ್‍ನ ಚೆಂಗ್ಡೆ ಇಂಟರ್‍ಮೀಡಿಯೇಟ್ ಪೀಪಲ್ಸ್ ಕೋರ್ಟ್ ಹೇಳಿದೆ.

ಅಲ್ಲದೆ, ಹು ವಿಶ್ವದ ಶ್ರೀಮಂತ ಸಾಲಗಾರರಲ್ಲಿ ಒಬ್ಬರಾದ ಚೀನಾ ಅಭಿವೃದ್ಧಿ ಬ್ಯಾಂಕಿನ (ಸಿಬಿಡಿ) ಕಮ್ಯೂನಿಸ್ಟ್ ಪಕ್ಷದ ಕಾರ್ಯದರ್ಶಿಯಾಗಿದ್ದಾರೆ. ಬಹುಕೋಟಿ ಡಾಲರ್‍ಗಳ ರಸ್ತೆ, ರೈಲ್ವೆ, ಹೆದ್ದಾರಿ, ಬಂದರುಗಳು, ವಿಮಾನ ನಿಲ್ದಾಣ, ಇಂಧನ ಘಟಕಗಳು ಹಾಗೂ ಮತ್ತಿತರ ಮೂಲಭೂತ ಅಭಿವೃದ್ಧಿ ಯೋಜನೆಗಳನ್ನು ಪೂರ್ವದಿಂದ ಯೂರೋಪ್‍ಗೆ ದಕ್ಷಿಣ ಪೆಸಿಫಿಕ್ ಮಾರ್ಗದ ಮೂಲಕ ಏಷ್ಯಾ, ಆಫ್ರಿಕಾ ಹಾಗೂ ಮಧ್ಯಪ್ರಾಚ್ಯಗಳಲ್ಲಿ ನಿರ್ಮಿಸುವ ವ್ಯಾಪಾರವನ್ನು ವಿಸ್ತರಿಸಲು ಬಹುಕೋಟಿ ಬೆಲ್ಟ್ ಮತ್ತು ರಸ್ತೆ ಉಪಕ್ರಮಕ್ಕೆ ಸಿಬಿಡಿ ಮುಖ್ಯ ಹಣಕಾಸು ಮೂಲವಾಗಿದೆ.

ಲಂಚ ಸ್ವೀಕರಿಸಿರುವ ಬಗ್ಗೆ ಕೋರ್ಟ್‍ನಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡ ಹು ಅವರನ್ನು ಜೈಲಿ ಹಾಕಲಾಗಿದೆ. ಆರ್ಥಿಕ ಅಪರಾಧಗಳಲ್ಲಿ ಚೀನಾ ನ್ಯಾಯಾಲಯಗಳು ನೇಣುಗಂಬಕ್ಕೇರಿಸುವ ತೀರ್ಪನ್ನು ನೀಡುವ ಸಾಧ್ಯತೆಗಳಿವೆ. ಈ ಹಿಂದೆ ಇದೇ ಪ್ರಕರಣದಲ್ಲಿ ಅಪಾದಿತನಾದ ಸರ್ಕಾರಿ ಹಣಕಾಸು ಸಂಸ್ಥೆಯ ಮಾಜಿ ಅಧ್ಯಕ್ಷ ಮತ್ತು ಹೌರೊಂಗ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಹೊಂದಿದ್ದ ಲಾಯ್ ಶಿಯೋಮಿನ್ ಅವರಿಗೆ ಮರಣ ದಂಡನೆ ವಿಧಿಸಲಾಗಿತ್ತು.

TRENDING