Tuesday, January 26, 2021
Home ಜಿಲ್ಲೆ ಚಾಮರಾಜನಗರ ಚಾಮರಾಜನಗರದ ಮೆಡಿಕಲ್ ಕಾಲೇಜಿಗೆ ಎಂಟ್ರಿ ಕೊಟ್ಟ ಕಪ್ಪು ಚಿರತೆ

ಇದೀಗ ಬಂದ ಸುದ್ದಿ

ಚಾಮರಾಜನಗರದ ಮೆಡಿಕಲ್ ಕಾಲೇಜಿಗೆ ಎಂಟ್ರಿ ಕೊಟ್ಟ ಕಪ್ಪು ಚಿರತೆ

ಚಾಮರಾಜನಗರ: ಮೆಡಿಕಲ್​ ಕಾಲೇಜಿನ ಕಾರಿಡಾರ್​​ನಲ್ಲಿ ಚಿರತೆಯೊಂದು ಓಡಾಡಿದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಾಮರಾಜನಗರ ಮೆಡಿಕಲ್​ ಕಾಲೇಜ್ ಕ್ಯಾಂಪಸ್​ನಲ್ಲಿ ಈ ಘಟನೆ ನಡೆದಿದೆ.

ಟ್ವಿಟರ್​ನಲ್ಲಿ ಐಎಫ್​​ಎಸ್​ ಅಧಿಕಾರಿ ಪರ್ವೀನ್​ ಕಸ್ವಾನ್​ ಈ ವಿಡಿಯೋವನ್ನ ಶೇರ್​ ಮಾಡಿದ್ದಾರೆ. ದೊಡ್ಡ ಬೆಕ್ಕಿನ ಜಾತಿಗೆ ಸೇರಿದ ಈ ಪ್ರಾಣಿಯನ್ನ ಪರ್ವೀನ್​​ ಕಪ್ಪು ಚಿರತೆ ಎಂದು ಗುರುತಿಸಿದ್ದಾರೆ. ಕಪ್ಪು ಚಿರತೆ ಕಾಲೇಜನ್ನ ಪರಿಶೀಲನೆ ನಡೆಸುತ್ತಿದೆ ಅಂತಾ ಶೀರ್ಷಿಕೆ ನೀಡಿದ್ದಾರೆ .

ಈ ಸಿಸಿ ಟಿವಿ ಫೂಟೇಜ್​ನಲ್ಲಿ ಚಿರತೆ ಮೆಡಿಕಲ್​ ಕಾಲೇಜಿಗೆ ಸೇರಿದ ಕಟ್ಟಡದಲ್ಲಿ ಓಡಾಡುತ್ತಿರೋದನ್ನ ಗಮನಿಸಬಹುದಾಗಿದೆ. ಬಂದ ದ್ವಾರದಿಂದಲೇ ವಾಪಸ್ಸಾಗಲು ಚಿರತೆ ಪರಿಶೀಲನೆ ನಡೆಸುತ್ತಿರೋದನ್ನೂ ಕಾಣಬಹುದಾಗಿದೆ. ಈ ವಿಡಿಯೋ ಟ್ವಿಟರ್​ನಲ್ಲಿ ವೈರಲ್ ಆಗಿದೆ. ಕಮೆಂಟ್ನಲ್ಲಿ ಒಬ್ಬರು ಭಗೀರಾ ಕಾಲೇಜಿನಲ್ಲಿ ದಾಖಲಾತಿ ಹೊಂದಲು ಬಂದಿರಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

TRENDING