Sunday, January 24, 2021
Home ದೆಹಲಿ BIG NEWS: ಸೋಮವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮೋದಿ ಸಭೆ

ಇದೀಗ ಬಂದ ಸುದ್ದಿ

BIG NEWS: ಸೋಮವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮೋದಿ ಸಭೆ

ನವದೆಹಲಿ: ಸೋಮವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಲಿದ್ದಾರೆ.

ಭಾರತದಲ್ಲಿ ಕೊರೋನಾ ಲಸಿಕೆ ಹಂಚಿಕೆ ಕುರಿತಾಗಿ ಅವರು ಸಮಾಲೋಚನೆ ನಡೆಸಲಿದ್ದಾರೆ. ಲಸಿಕೆ ಹಂಚಿಕೆಗೆ ಸಿದ್ಧತೆ ಈಗಾಗಲೇ ಪೂರ್ಣಗೊಂಡಿದ್ದು, ಮೊದಲ ಹಂತದಲ್ಲಿ ಡ್ರೈರನ್ ನಡೆಸಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ತಯಾರಿ ನಡೆಸಲಾಗಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಭೆ ನಡೆಸಲಿರುವ ಮೋದಿ ಲಸಿಕೆ ಪೂರೈಕೆ, ಹಂಚಿಕೆ, ನೀಡಿಕೆ ಬಗ್ಗೆ ಚರ್ಚೆ ನಡೆಸಿ ಸೂಚನೆ ನೀಡಲಿದ್ದಾರೆನ್ನಲಾಗಿದೆ.

TRENDING